Mankutimmana Kagga by D.V. Gundappa
ಕಲೆಗಳಲಿ ಪರಮಕಲೆ ಜೀವನದ ಲಲಿತಕಲೆ । ಕಲಿಸಲದನಳವಲ್ಲ ಬಾಹ್ಯಬೋಧನೆಯಿಂ ॥ ಒಲಿದೊಲಿಸಿಕೊಳುವ ಲೌಕಿಕನಯದ ಸೊಗಸ ನೀಂ । ತಿಳಿವುದೊಳಹದದಿಂದ - ಮಂಕುತಿಮ್ಮ ॥ ೮೨೫ ॥
kalegaLali paramakale jIvanada lalitakale । kalisal adan aLavalla bAhya bOdhaneyim ॥ olidu olisikoLuva laukika nayada sogasa nIm । tiLivudu Olahadadinda - Mankutimma ॥ 825 ॥
ಜಗತ್ತಿನಲ್ಲಿರುವ ಎಲ್ಲಾ ಕಲೆಗಳಲ್ಲಿ ಅತೀ ಉತ್ತಮವಾದ ಕಲೆ ಎಂದರೆ ‘ಬದುಕುವ’ ಕಲೆ. ಇದನ್ನು ಹೊರ ಬೋಧನೆಯಿಂದ ಕಲಿಸಲು ಸಾಧ್ಯವಿಲ್ಲ. ನಾವು ಜಗತ್ತಿಗೆ ಒಲಿದು, ಜಗತ್ತನ್ನು ನಾವು ಒಲಿಸಿಕೊಳ್ಳುವುದೇ ಬದುಕಿನ ಸೊಗಸು. ಇದನ್ನು ನೀನು ನಿನ್ನ ಅಂತರಂಗದ ಮಂಥನದಿಂದ ಅರಿತುಕೋ, ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"The finest of the fine arts is the art of living. One can not teach it by external instructions. One must learn to give and take, to concede and convince. Life will be beautiful then. This wisdom will come from inner peace only." - Mankutimma
Video Coming Soon
Detailed video explanations by scholars and experts will be available soon.