Mankutimmana Kagga by D.V. Gundappa
ಗುರಿಯನೈದದೊಡೊಮ್ಮೆ ಮರಳಿ ನೀನುಜ್ಜುಗಿಸು । ಕರಯುಕ್ತಿ ಪೆರ್ಚಿಯೋ, ದೈವ ಕರುಣಿಸಿಯೋ ॥ ಕರುಮಋಣ ಸಂಧಿಸಿಯೊ ಕೈಗೂಡಬಹುದು ಗುರಿ । ಪರವೆಯಿಡದುಜ್ಜುಗಿಸು - ಮಂಕುತಿಮ್ಮ ॥ ೮೨೪ ॥
guriyanu aidadoDe omme maraLi nInu ujjugisu । karayukti perchiyO, daiva karuNisiyO ॥ karuma RuNa sandhisiyo kaigUDabahudu guri । parave iDade ujjugisu - Mankutimma ॥ 824 ॥
ನಿನ್ನ ಕೃಷಿಯಿಂದ ಆಸೆಪಟ್ಟ ಗುರಿ ತಲುಪಲಾಗದಿದ್ದರೆ ಮತ್ತೆ ಪ್ರಯತ್ನ ಮಾಡು. ನಮ್ಮ ಪ್ರಯತ್ನ ಮತ್ತು ನಿರಂತರ ಕೃಷಿಯಿಂದಲೋ, ಆ ದೈವದ ಕರುಣೆಯಿಂದಲೋ ಅಥವಾ ನಮ್ಮ ಪೂರ್ವ ಕರ್ಮದ ಫಲವೆಂಬಂತೆಯೋ,ನಾವು ಹಿಡಿದ ಕೆಲಸ ಗುರಿ ತಲುಪಬಹುದು. ಆದರೆ ಇವಾವುದರ ಪರಿವೆಯೂ ಇಲ್ಲದೆ ನೀನು ನಿನ್ನ ಕೃಷಿಯನ್ನು ಮುಂದುವರೆಸು ಎಂದು ಬದುಕಿನಲ್ಲಿ ಆಸೆಪಟ್ಟ ಗುರಿಯನ್ನು ತಲುಪುವ ಸೂಕ್ತ ಮಾರ್ಗವನ್ನು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"If you do not reach the goal at first, try again. By your skill, or by luck's help, or due to previous good karma – your efforts may fructify. You don't give up and keep on trying." - Mankutimma
Video Coming Soon
Detailed video explanations by scholars and experts will be available soon.