Back to List

Kagga 823 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಎಣಿಕೆಯೊಳಿತಾದೊಡೆಯುಮೊಳಿತನಾಗಿಸದು ಹಟ । ಮಣಿಕನಕ ಸಂಕೋಲೆ ತನುವ ಬಂಧಿಸದೇಂ? ॥ ತನಯನಿರಿದಸಿ ನಿನ್ನ ಮೈಯ ಹುಣ್ಣಾಗಿಸದೆ? । ಮನ ಸರ್ವಸಮವಿರಲಿ - ಮಂಕುತಿಮ್ಮ ॥ ೮೨೩ ॥

eNike OlitAdoDeyum OlitanAgisadu haTa । maNi kanaka sankOle tanuva bandhisadEm? ॥ tanayanu irida asi ninna maiya huNNagisade? । mana sarva samavirali - Mankutimma ॥ 823 ॥

Meaning in Kannada

ನಮ್ಮ ಆಲೋಚನೆ ಉತ್ತಮವಾದರೂ, ಉತ್ತಮ ಕಾರ್ಯವನ್ನೇ ಮಾಡಲು ನಮ್ಮ ಹಟ ನಮ್ಮನ್ನು ಬಿಡುವುದಿಲ್ಲ. ಬಂಗಾರ ಮತ್ತು ಮಣಿಗಳಿಂದ ಪೋಣಿಸಲ್ಪಟ್ಟ ಸಂಕೋಲೆಯಾದರೂ ಅದು ನಮ್ಮ ದೇಹವನ್ನು ಬಂಧಿಸುವುದಿಲ್ಲವೇ? ನಮ್ಮ ಮಗನೇ ಆದರೂ, ಅವನು ಕತ್ತಿಯಿಂದ ನಮ್ಮನ್ನು ಇರಿದರೆ ಮೈ ಹುಣ್ಣಾಗುವುದಿಲ್ಲವೇ? ಹಾಗಾಗಿ ಮನ ಸರ್ವ ಸಮವಿರಲಿ ಎಂದು ಒಂದು ಉತ್ತಮ ವಿಚಾರವನ್ನು ನಮ್ಮ ಮುಂದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"Stubbornness may be right. But it does not do any good. Cuffs are still a restraint even if they are made of pearls and gold. Your body will bleed even if it is your son who stabs. We need to learn to be objective and bring peace to our minds and look at all things equally." - Mankutimma

Themes

MoralityPeace

Video Section

Video Coming Soon

Detailed video explanations by scholars and experts will be available soon.