Mankutimmana Kagga by D.V. Gundappa
ಆತುರತೆಯಿರದ ಸತತೋದ್ಯೋಗ ಸರ್ವಹಿತ । ಭೂತದಾವೇಶವಾತುರತೆಯಾತ್ಮಕ್ಕೆ ॥ ಕಾತರನು ನಿನಾಗೆ ಮೂರನೆಯ ಸಹಭಾಗಿ । ಪ್ರೀತನಾಗುವನೇನೊ? - ಮಂಕುತಿಮ್ಮ ॥ ೮೨೨ ॥
aaturateyirada satata udyOga sarvahita । bhUtada aaveshavu aaturate aatmakke ॥ kAtaranu nInAge mUraneya sahabhAgi । prItanAguvanEno? - Mankutimma ॥ 822 ॥
‘ಆತುರತೆ’ ಯಿಲ್ಲದೆ ಸತತವಾಗಿ ಕಾರ್ಯನಿರತನಾಗಿದ್ದರೆ ಅದು ಸರ್ವರ ಹಿತಕ್ಕೆ ಕಾರಣವಾಗುತ್ತದೆ. ಹಾಗಲ್ಲದೆ ಆತುರತೆಯನ್ನು ತೋರಿದರೆ ಅದು ಆತ್ಮಕ್ಕೆ ಭೂತದಾವೇಶದಂತಾಗುತ್ತದೆ. ನೀನು ಕಾತರನಾಗಿ ಸದಾಕಾಲವಿದ್ದರೆ, ನಿನ್ನ ಎಲ್ಲ ಕಾರ್ಯಗಳಲ್ಲಿ ತನ್ನ ಪಾತ್ರವನ್ನೂ ವಹಿಸುವ ಆ ಮೂರನೆಯವನು ಸುಪ್ರೀತನಾಗುವನೇನೋ? ಎಂದು ಒಂದು ಪ್ರಶ್ನೆಯನ್ನು ನಮ್ಮ ಮುಂದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು.
"Persistent hard work without anxiety will benefit all. If one acts as if he is possessed, then it is not good for the soul. If you do all work in an excited state, then the third party (God, Fate or Luck) involved – other than you and the work, will not be happy." - Mankutimma
Video Coming Soon
Detailed video explanations by scholars and experts will be available soon.