Mankutimmana Kagga by D.V. Gundappa
ಏನೇನು ಹಾರಾಟ ಸುಖಕೆಂದು ಲೋಕದಲಿ! । ತಾನಾಗಿ ಗಾಳಿವೊಲ್ ಬಂದ ಸುಖವೆ ಸುಖ ॥ ನೀನೆ ಕೈಬೀಸಿಕೊಳೆ ನೋವು ಬೆವರುಗಳೆ ಫಲ । ಮಾಣು ಮನದುಬ್ಬಸವ - ಮಂಕುತಿಮ್ಮ ॥ ೮೨೧ ॥
EnEnu hArATa sukhakendu lOkadali! । tAnAgi gALivol banda sukhave sukha ॥ nIne kaibIsikoLe nOvu bevarugaLe phala । mANu manada ubbasava - Mankutimma ॥ 821 ॥
ಈ ಲೋಕದಲ್ಲಿ ಸುಖವನ್ನು ಪಡೆಯಲು ಮನುಷ್ಯರು ಏನೆಲ್ಲ ರೀತಿಯ ಹಾರಾಟ ಮಾಡುತ್ತಾರೆ. ಆದರೆ ಪ್ರಯತ್ನಪೂರ್ವಕವಾಗಿ ಪಡೆದ ಸುಖ ಸುಖವಲ್ಲ, ತಾನಾಗೆ ಲಭ್ಯವಾದ ಸುಖವೇ ಸುಖ. ಗಾಳಿಯನ್ನು ನಾವೇ ಬೀಸಿಕೊಂಡರೆ ಕೇವಲ ಕೈ ನೋವು, ಮೈ ಬೆವರುಗಳೇ ಫಲ. ಹಾಗಲ್ಲದೆ ತಾನೇ ಬೀಸುವ ಗಾಳಿ ಹಿತ ತರುತ್ತದೆ. ಹಾಗಾಗಿ ಸುಖ ಪಡೆಯಲು ನಮ್ಮ ಅತಿ ಪ್ರಯತ್ನವನ್ನು ಬಿಡಬೇಕು ಎನ್ನುವ ಸಂದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"What antic one does in this world for happiness? We must accept whatever happiness comes to us like wind. If we try to grab it by swing our arms, fatigue and sweat will be the only outcome. We must reduce anxiety and find calm." - Mankutimma
Video Coming Soon
Detailed video explanations by scholars and experts will be available soon.