Back to List

Kagga 820 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಜೀವನವ್ಯಾಪಾರ ಮೂವರೊಟ್ಟು ವಿಚಾರ । ಭಾವಿಪೊಡೆ ನೀನು, ಜಗ, ಇನ್ನೊಂದದೃಷ್ಟ ॥ ಆವಗಂ ಮೂರನೆಯ ಭಾಗಸ್ಥನಿಚ್ಛೆ ಬಲ । ಈ ವಿವರವರಿಯೆ ಸುಖ - ಮಂಕುತಿಮ್ಮ ॥ ೮೨೦ ॥

jIvana vyApAra mUvara oTTu vichAra । bhAvipoDe nInu, jaga, innondu adRuShTa ॥ aavagam mUraneya bhAgasthana icChe bala । ii vivarava ariye sukha - Mankutimma ॥ 820 ॥

Meaning in Kannada

ಜಗತ್ತಿನ ಜೀವನದ ವ್ಯಾಪಾರದಲ್ಲಿ ಮೂರು ಜನರ ಒಟ್ಟುವಿಚಾರ ಸಮ್ಮಿಳಿತವಾಗಿರುತ್ತದೆ. ಯೋಚಿಸಿ ನೋಡಿದರೆ ಒಂದು ನೀನು, ಎರಡನೆಯದು ಈ ಜಗತ್ತು ಮತ್ತು ಮೂರನೆಯದು ಆ ಕಾಣದ ಕೈ. ಆದರೆ ಆ ಕಾಣದ ಶಕ್ತಿಯ ಬಲ ಮತ್ತು ಪ್ರಭಾವವೇ ಅಧಿಕವಾಗಿರುತ್ತದೆ. ಈ ವಿವರಗಳನ್ನು ಅರಿತುಕೊಂಡರೆ ನೆಮ್ಮದಿಯಾಗಿರಬಹುದು ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"There are three parts to any transaction in life - self, the world and luck. It is the party who has the third part who usually gets his way. If one understands this, life will be easy and happy." - Mankutimma

Themes

WisdomLifeFateSelf

Video Section

Video Coming Soon

Detailed video explanations by scholars and experts will be available soon.