Back to List

Kagga 819 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಕಡಿದೊಡೆ ಪರೀಕ್ಷೆಗುಳಿವುವು ಸತ್ತನಾರುಗಳು । ಕಡಿಯದಿರೆ ಮರದಿ ಪರಿಯುವುದು ಜೀವರಸ ॥ ಬಿಡುವಮ್ ಈ ಬಾಳ್ ಅದೇಕೆಂಬ ಚರ್ಚೆಯ; ನಾವು । ದುಡಿವಮ್ ಅದು ಪೆಂಪುಗೊಳೆ - ಮಂಕುತಿಮ್ಮ ॥ ೮೧೯ ॥

kaDidoDe parIkShege uLivuvu sattanArugaLu । kaDiyadire maradi pariyuvudu jIvarasa ॥ biDuvum ii bAL adEkemba charcheya; nAvu । duDivam adu pempugoLe - Mankutimma ॥ 819 ॥

Meaning in Kannada

ಮುಕ್ತಕ ೮೧೭ನ್ನು ಮುಂದುವರೆಸಿ ಮಾನ್ಯ ಗುಂಡಪ್ಪನವರು, ಮರದ ಕೊಂಬೆ ರೆಂಬೆಗಳನ್ನು ಕಡಿದರೆ ನಿನಗೆ ಸಿಗುವುದು ಕೇವಲ ಜೀವಕಳೆದುಕೊಂಡ ನಾರುಗಳು, ಬೇರುಗಳು. ಕಡಿಯದಿದ್ದರೆ ಅವುಗಳಲ್ಲಿ ಜೀವರಸ ಹರಿಯುವುದು. ಈ ಬಾಳೂ ಸಹ ಹೀಗೆಯೇ. ಇದು ಏಕೆ? ಏನು? ಹೀಗೇಕೆ? ಹಾಗೇಕಲ್ಲ? ಮುಂತಾದ ಚರ್ಚೆಗೆ ಎಡೆಕೊಡದೆ ಬದುಕನ್ನು ವೃದ್ಧಿಗೊಳಿಸುವ ಮತ್ತು ಅಭಿವೃದ್ಧಿಗೊಳಿಸುವ ಕೆಲಸದಲ್ಲಿ ತೊಡಗಿದರೆ ಒಳ್ಳೆಯದು, ಎಂದಿದ್ದಾರೆ ಈ ಮುಕ್ತಕದಲ್ಲಿ.

Meaning & Interpretation

"If you cut it (a tree) to examine it - all you will be left is dried wood and bark. If you don't cut it, life flows and enhances in it. Similarly, we should not examine/analyze our lives too much. We must put in enough efforts to make it blossom well." - Mankutimma

Themes

LifeNature

Video Section

Video Coming Soon

Detailed video explanations by scholars and experts will be available soon.