Back to List

Kagga 818 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ವನಜಂತುಗಳ ಸಸ್ಯಮೂಲಿಕಾಹಾರದಿಂ । ಗುಣವನರಿತವರಾದಿವೈದ್ಯರೌಷಧದೊಳ್ ॥ ಒಣತರ್ಕಗಳಿನೇನು? ಜೀವನದ ವಿವಿಧರಸ- । ದನುಭವದಿ ತತ್ತ್ವವೆಲೊ - ಮಂಕುತಿಮ್ಮ ॥ ೮೧೮ ॥

vanajantugaLa sasya mUlikA aahAradim । guNavanu araitavar aadi vaidyaru auShadhadoL ॥ oNatarkagaLin Enu? jIvanada vividha rasada । anubhavadi tattvavelo - Mankutimma ॥ 818 ॥

Meaning in Kannada

ಈ ಜಗತ್ತಿನಲ್ಲಿ ವನ್ಯ ಮೃಗಗಳು ತಮ್ಮ ಅನಾರೋಗ್ಯದ ಕಾರಣವನ್ನು ತಾವೇ ಅರಿತು ತಮಗೆ ಬೇಕಾದ ಔಷಧೀಯ ಗಿಡ ಮೂಲಿಕೆಗಳನ್ನು ತಾವೇ ಕಂಡುಗೊಳ್ಳುವ ಗುಣವನ್ನು ಅನುಸರಿಸಿ ಮನುಕುಲದ ಆದಿ ವೈದ್ಯರುಗಳು ಔಷಧಿಗಳನ್ನು ಕಂಡುಕೊಂಡರು. ಹಾಗೆಯೇ, ಒಣತರ್ಕಮಾಡದೆ ಬದುಕಿನ ಅನುಭವದಿಂದ ಜೀವನದ ತತ್ವದ ರಸಾನುಭವವನ್ನು ಪಡೆಯಬೇಕು ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"The early doctors came to know about the medicinal value of all the plants by observing the animals of the forest use them. The did not find it by theorizing. What can be achieved by debates? The ultimate truth can only be realized through experiences in life." - Mankutimma

Themes

WisdomLifePeace

Video Section

Video Coming Soon

Detailed video explanations by scholars and experts will be available soon.