Mankutimmana Kagga by D.V. Gundappa
ನ್ಯಾಯಾಧಿಪತಿ ತನ್ನ ಮತಿ ಮನಸುಗಳನೆಲ್ಲ । ಸ್ವೀಯಲಾಭಸ್ಮರಣೆಯುಳಿದು ವಿವಾದಗಳಾ ॥ ದಾಯನಿರ್ಣಯಕೆ ಯೋಜಿಸುವಂತೆ, ನೀಂ ಜಗದ । ಶ್ರೇಯಸ್ಸಿಗುಜ್ಜುಗಿಸು - ಮಂಕುತಿಮ್ಮ ॥ ೮೧೪ ॥
nyAyAdhipati tanna mati manasugaLanella । svIya lAbha smaraNeya uLidu vivAdagaLa aa ॥ dAya nirNayake yOjisuvante, nIm jagada । shrEyassige ujjugisu - Mankutimma ॥ 814 ॥
ನಿರ್ಮಮಕಾರದ, ನಿರ್ಮೋಹದ ಮತ್ತು ನಿರಹಂಕಾರದ ಸ್ಥಿತಿ ಬಹಳ ಉತ್ತಮವಾದ ಸ್ಥಿತಿ ಎಂದು ಹಿಂದಿನ ಮುಕ್ತಕದಲ್ಲಿ ಉಲ್ಲೇಖವಾಗಿದೆ. ಆದರೆ ಆ ಸ್ಥಿತಿಯನ್ನು ತಲುಪುವುದು ಹೇಗೆ ಎಂಬುದನ್ನು ಈ ಮುಕ್ತಕದಲ್ಲಿ ಉಲ್ಲೇಖಿಸುತ್ತಾ ಮಾನ್ಯ ಗುಂಡಪ್ಪನವರು,ನ್ಯಾಯಾಧಿಪತಿಯು ನ್ಯಾಯ ವಿತರಣೆ ಮಾಡುವಾಗ, ಹೇಗೆ ತನ್ನ ಸ್ವಂತ ಲಾಭವನ್ನು ಬದಿಗಿಟ್ಟು ತನ್ನ ಮನಸ್ಸು ಮತ್ತು ಬುದ್ಧಿಗಳನ್ನು, ಕೇವಲ ದಾವೆ ಹೂಡಿದವರ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ತೀರ್ಮಾನಮಾಡಲು ಉಪಯೋಗಿಸುತ್ತಾನೋ ಹಾಗೆ, ಜಗತ್ತಿನಲ್ಲಿ ಜೀವಿಸುವಾಗ ನಿನ್ನ ಸ್ವಂತದ ಹಿತವನ್ನು ಬದಿಗಿಟ್ಟು ಜಗತ್ತಿನ ಹಿತಕ್ಕಾಗಿ ದುಡಿ, ಎಂದು ಸೂಚಿಸಿದ್ದಾರೆ.
"A judge sets aside all thoughts of personal gain aside and listens to all the parties in a case. He needs this detachment to be able to give impartial judgments. One must exercise the same detachment (selflessness) and work towards bettering this world." - Mankutimma
Video Coming Soon
Detailed video explanations by scholars and experts will be available soon.