Back to List

Kagga 813 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಬಿಟ್ಟೆನೆಲ್ಲವನೆಂಬ ಹೃದಯಶೋಷಣೆ ಬೇಡ । ಕಟ್ಟಿಕೊಳ್ಳುವ ಶಿರಃಪೀಡೆಯುಂ ಬೇಡ ॥ ತೊಟ್ಟು ನಿರಹಂಕೃತಿಯ ಕವಚವನು ನೀಂ ಪೋರು । ಮುಟ್ಟದಿಳೆಯಸಿ ನಿನ್ನ - ಮಂಕುತಿಮ್ಮ ॥ ೮೧೩ ॥

biTTenu ellavanemba hRudaya shoShaNe bEDa । kaTTikoLLuva shiraH pIDeyum bEDa ॥ toTTu nirahankRutiya kavachavanu nIm pOru । muTTadu iLeya asi ninna - Mankutimma ॥ 813 ॥

Meaning in Kannada

ನಾನು ಎಲ್ಲವನ್ನೂ ಬಿಟ್ಟಿದ್ದೇನೆ ಎಂದು ಹೃದಯ ಶೋಷಣೆಯನ್ನೂ ಮಾಡಿಕೊಳ್ಳಬೇಡ ಅಥವಾ ಎಲ್ಲವನ್ನೂ ಕಟ್ಟಿಕೊಂಡು ತಲೆನೋವನ್ನೂ ತಂದುಕೊಳ್ಳಬೇಡ. ‘ನಿರಹಂಕಾರ’ ದ ಕವಚವನ್ನು ತೊಟ್ಟುಬಿಡು. ಆಗ ಈ ಜಗತ್ತಿನ ಕತ್ತಿಯ ಅಲಗು ನಿನ್ನನ್ನು ಏನೂ ಮಾಡಲಾಗದು ಎಂದು ಘಾಸಿಗೊಳ್ಳದೆ ಬದುಕನ್ನು ಹೇಗೆ ಸಾಗಿಸಬೇಕು ಎನ್ನುವುದನ್ನು ಸೂಚಿಸಿದ್ದಾರೆ, ಈ ಮುಕ್ತಕದಲ್ಲಿ ಮಾನ್ಯ ಗುಂಡಪ್ಪನವರು.

Meaning & Interpretation

"Let there be no pain in the heart due to complete renouncement. Let there no headaches due to excessive involvement either. Wear the armour of selflessness and the swords of this world will not be able to hurt you." - Mankutimma

Themes

LifeSufferingSelfLove

Video Section

Video Coming Soon

Detailed video explanations by scholars and experts will be available soon.