Back to List

Kagga 812 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಅಳಬೇಕು, ನಗಬೇಕು, ಸಮತೆ ಶಮವಿರಬೇಕು । ಹೊಳೆಯ ನೆರೆವೊಲು ಹೃದಯರಸ ಹರಿಯಬೇಕು ॥ ಅಲೆಯಿನಲುಗದ ಬಂಡೆಯವೊಲಾತ್ಮವಿರಬೇಕು । ತಿಳಿದವರ ಚರಿತವದು - ಮಂಕುತಿಮ್ಮ ॥ ೮೧೨ ॥

aLa bEku, naga bEku, samate shamavirabEku । hoLeya nerevolu hRudayarasa hariya bEku ॥ aleyin alugada banDeyavol aatmavirabEku । tiLidavara charitavadu - Mankutimma ॥ 812 ॥

Meaning in Kannada

ಜಗತ್ತಿನಲ್ಲಿ ಬದುಕುವಾಗ ಎಲ್ಲರೊಡನೆ ಸೇರಿ ನಗಬೇಕು, ಸಮಯ ಬಂದಾಗ ಅಳಲೂ ಬೇಕು. ಆದರೆ ಅಂತರಂಗದಲ್ಲಿ ಶಮ, ಎಂದರೆ ನಿಗ್ರಹವಿರಬೇಕು. ಹೃದಯದ ಭಾವರಸವು, ಹೊಳೆಯ ನೆರೆಯಂತೆ ಹರಿಯಬೇಕು. ಆದರೆ ಆತ್ಮ ಆ ಭಾವರಸದ ಹೊಡೆತಕ್ಕೆ ಜಗ್ಗದೆ, ಬಂಡೆಯಂತೆ ದೃಢವಾಗಿ ಇರಬೇಕು. ಜಗತ್ತಿನಲ್ಲಿ, ‘ಅರಿತವರ ಮತ್ತು ಜ್ಞಾನಿ’ಗಳ ನಡವಳಿಕೆ ಆ ರೀತಿಯಿರುತ್ತದೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"One must cry; one must laugh. But there must be a sensible limit to both that one must not cross. The emotions in our heart must flow like a river (not stagnant like a pond). But, our mind must be like a rock that does not move even a bit in spite of facing endless waves. This is the picture of a wise man." - Mankutimma

Themes

DeathNatureLove

Video Section

Video Coming Soon

Detailed video explanations by scholars and experts will be available soon.