Mankutimmana Kagga by D.V. Gundappa
ಹೊರಗು ಹೊರೆಯಾಗದವೊಲ್ ಒಳಗನನುಗೊಳಿಸಿ, ನೀ- । ನೊಳಗು ಶೆಕೆಯಾಗದವೊಲ್ ಅಳವಡಿಸೆ ಹೊರಗ ॥ ಸರಿಸಮದೊಳೆರಡನುಂ ಬಾಳಿನಲಿ ಜೋಡಿಪುದೆ । ಪರಮಜೀವನಯೋಗ - ಮಂಕುತಿಮ್ಮ ॥ ೮೧೧ ॥
horagu horeyAgadavol oLaganu anugoLisi nInu । oLagu shekeyAgadavol aLavaDise horaga ॥ sarisamadoL eradanum bALinali jODipude । parama jIvana yOga - Mankutimma ॥ 811 ॥
ನಮ್ಮ ಹೊರಗಿನದನ್ನು ಹೊರೆಯೆಂದು ಭಾವಿಸದಂತೆ ನಮ್ಮ ಒಳಗನ್ನು ಸಿದ್ಧಗೊಳಿಸಿ, ನಮ್ಮ ಹೊರಗು ನಮ್ಮೊಳಗೆ ನುಗ್ಗಿ ಬಿಸಿಯನ್ನುಂಟು ಮಾಡದಂತೆ ನಮ್ಮಒಳಗನ್ನೂ ಅಳವಡಿಸಿಕೊಂಡು,ಇವೆರಡನ್ನೂ ಸರಿಸಮವಾಗಿ ಜೋಡಿಸಿಕೊಳ್ಳಲಾದರೆ ಅದೇ ಜೀವನದಲ್ಲಿ ಅದೇ ಅತ್ಯುತ್ತಮವಾದ ಯೋಗ ಎಂದು ಹೇಳಿದ್ದಾರೆ, ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
"The inner conscience must be calibrated so that the worldly dealings will not be too heavy. Everyday actions must be in such a way that they do not suffocate the inner conscience. Balancing both of them is greatest art of life." - Mankutimma
Video Coming Soon
Detailed video explanations by scholars and experts will be available soon.