Mankutimmana Kagga by D.V. Gundappa
ಬರಿಭಕ್ತಿ ಬರಿಕರ್ಮ ಬರಿತರ್ಕ ದೊರಕಿಸದು । ಪರಮಾತ್ಮ ದರ್ಶನವ; ಬೇಕದಕೆ ತಪಸು ॥ ಪರಿಪೂರ್ಣ ಜೀವನಾನುಭವತಾಪದಿ ಮತಿಯು । ಪರಿಪಕ್ವವಾಗಲದು - ಮಂಕುತಿಮ್ಮ ॥ ೮೧೦ ॥
bari bhakti bari karma bari tarka dorakisadu । paramAtma darshanava; bEkadake tapasu ॥ paripUrNa jIvanAnubhava tApadi matiyu । paripakvavAgaladu - Mankutimma ॥ 810 ॥
ಕೇವಲ ಭಕ್ತಿ, ಕರ್ಮ ಅಥವಾ ತರ್ಕದಿಂದ ಪರಮಾತ್ಮ ದರ್ಶನವಾಗುವುದಿಲ್ಲ. ಅದಕ್ಕೆ ತಪಸ್ಸು ಬೇಕು, ಜೀವನದ ಪರಿಪೂರ್ಣ ಅನುಭವದ ಬೇಗೆಯಲ್ಲಿ ಬೆಂದು ಹೊರಬಂದರೆ ಆಗ ನಮ್ಮ ಬುದ್ಧಿ ಪಕ್ವವಾಗುತ್ತದೆ ಎಂದು, ಪರತತ್ವ ದರ್ಶನಕ್ಕೆ ಅಗತ್ಯವಾಗಿ ಆಗಬೇಕಾದ ಸಂಸ್ಕಾರದ ಬಗ್ಗೆ ನುಡಿದಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"Devotion, actions, logic - any of these alone is not enough to get the full picture of the universal truth. It requires a lot of penance. It requires the mind to be subject to wide range of experiences throughout life. Only then will the mind be purified to be able to comprehend the truth." - Mankutimma
Video Coming Soon
Detailed video explanations by scholars and experts will be available soon.