Mankutimmana Kagga by D.V. Gundappa
ದ್ವೈತವೇನದ್ವೈತವೇನಾತ್ಮದರ್ಶನಿಗೆ? । ಶ್ರೌತಾದಿವಿಧಿಯೇನು? ತಪನಿಯಮವೇನು? ॥ ನೀತಿ ಸರ್ವಾತ್ಮಮತಿಯದರಿನಮಿತ ಪ್ರೀತಿ । ಭೀತಿಯಿಲ್ಲದನವನು - ಮಂಕುತಿಮ್ಮ ॥ ೮೦೯ ॥
dvaitavEnu advaitavEnu aatmadarshanige? । shrautaadi vidhiyEnu? tapa niyamavEnu? ॥ nIti sarvAtma matiyu adarin amita prIti । bhItiyilladan avanu - Mankutimma ॥ 809 ॥
ಆತ್ಮದರ್ಶನವಾದವನಿಗೆ ‘ದ್ವೈತ’ ಮತ್ತು ಅದ್ವೈತದಿಂದ ಏನಾಗಬೇಕು?. ಶ್ರುತಿಗಳು ವಿಧಿಸಿರುವ ನಿಯಮಗಳ ಪಾಲನೆ, ತಪಸ್ಸು ಮುಂತಾದವುಗಳನ್ನು ಅವನು ಮಾಡಬೇಕೆಂದಿಲ್ಲ. ಅವನಿಗೆ ಜಗತ್ತಿನಲ್ಲೆಲ್ಲಾ ಪರಮಾತ್ಮನ ಮತ್ತು ಪರತತ್ವದ ದರ್ಶನವಾಗುತ್ತಿರುವಾಗ ಅದರಿಂದ ಎಲ್ಲರಲ್ಲೂಅಮಿತವಾದ ಪ್ರೀತಿಯನ್ನು ಹೊಂದಿರುತ್ತಾನಾದ್ದರಿಂದ ಅವನು ನಿರ್ಭೀತನಾಗಿರುತ್ತಾನೆ ಎಂದು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"For a person who treats the whole of creation as himself, there is no fear. He has unlimited love to give to the world. He is a realized soul. He does not (need not) care about various philosophies of duality or singularity, about rituals and penances." - Mankutimma
Video Coming Soon
Detailed video explanations by scholars and experts will be available soon.