Back to List

Kagga 808 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಚಿರ ಶಿಕ್ಷೆಯಿಂ ನಿನಗೆ ಸರ್ವಾತ್ಮತಾಭ್ಯಾಸ । ಸರಳ ಸಹಜವದಹುದು ಮೂಗಿನುಸಿರವೊಲು ॥ ಪರನಿಯತಿಯಿರದು ಸ್ವತಸಿದ್ಧ ನಿಯತಿಯಿರೆ । ಹೊರಸಡಿಲಕೊಳಹಿಡಿತ - ಮಂಕುತಿಮ್ಮ ॥ ೮೦೮ ॥

chira shikSheyim ninage sarvAtmatA abhyAsa । saraLa sahajavadahudu mUgina usiravolu ॥ paraniyatiyiradu svatasiddha niyatiyire । horasaDilake oLahiDita - Mankutimma ॥ 808 ॥

Meaning in Kannada

ಕಾಣುವ ಎಲ್ಲೆಲ್ಲೂ ಮತ್ತು ಕಾಣುವ ಎಲ್ಲದರಲ್ಲೂ ಆ ಪರಬ್ರಹ್ಮವಸ್ತುವನ್ನೇ ಕಾಣುವ ಅಭ್ಯಾಸವಾಗಬೇಕಾದರೆ ಮನಸ್ಸು ಬುದ್ಧಿಗಳಿಗೆ ನಿರಂತರ ಶಿಕ್ಷಣವಾಗಬೇಕು. ಸಹಜವಾದ ನಮ್ಮ ಉಸಿರಾಟದಂತೆ ಆ ಭಾವ ನಮ್ಮಲ್ಲಿ ಮೂಡಬೇಕು. ಇದಕ್ಕೆ ಹೊರಗಿನ ನಿಯಮಗಳಾವುದೂ ಇರುವುದಿಲ್ಲ, ಅದು ಸ್ವತಃ ಅಭ್ಯಾಸದಿಂದ ತನ್ನಲ್ಲಿ ತಾನೇ ಕಂಡುಕೊಂಡ ಸತ್ಯವಾಗಬೇಕು. ಅಂತಹ ಸ್ಥಿತಿ ತಲುಪಲು ಹೊರಗೆ ಸಹಜವಾಗಿ ಎಲ್ಲರಂತೆಯೇ ಇದ್ದರೂ, ಒಳಗೆ ಮನಸ್ಸುಬುದ್ಧಿಗಳನ್ನು ಸಂಪೂರ್ಣವಾಗಿ ತಮ್ಮ ಹಿಡಿತದಲ್ಲಿಟ್ಟುಕೊಂಡಿರಬೇಕು, ಎನ್ನುವುದೇ ಮಾನ್ಯ ಗುಂಡಪ್ಪನವರ ಈ ಮುಕ್ತಕದ ಹೂರಣ.

Meaning & Interpretation

"To be able to treat everything in this world as if his own is a tough exercise. It has to be practiced tirelessly. Once mastered it is as simple as breathing. Once your inner self is disciplined, there is no need for any external forces to impose rules. To be free and flexible outside, the inside must be disciplined and strong." - Mankutimma

Themes

LifeSelf

Video Section

Video Coming Soon

Detailed video explanations by scholars and experts will be available soon.