Mankutimmana Kagga by D.V. Gundappa
ಜಗದ ಕಲ್ಯಾಣದೊಳಗಾತ್ಮ ಕಲ್ಯಾಣವನು । ಜಗದ ಬೀದಿಗಳೊಳು ನಿಜಾತ್ಮ ಯಾತ್ರೆಯನು ॥ ಜಗದ ಜೀವಿತದಿ ನಿಜಜೀವಿತದ ಪೂರ್ತಿಯನು । ಬಗೆಯಲರಿತವನೆ ಸುಖಿ - ಮಂಕುತಿಮ್ಮ ॥ ೮೦೭ ॥
jagada kalyANadoLage aatma kalyANavanu । jagada bIdigaLoLu nijAtma yAtreyanu ॥ jagada jIvitadi nijajIvitada pUrtiyanu । bageyalu aritavane sukhi - Mankutimma ॥ 807 ॥
ಜಗತ್ತಿನ ಕಲ್ಯಾಣದೊಳು ಆತ್ಮ ಕಲ್ಯಾಣವನು, ಜಗತ್ತಿನ ಬೀದಿಗಳಲ್ಲಿ ನಿಜ ಆತ್ಮ ಯಾತ್ರೆಯನು, ಜಗತ್ತಿನ ಬದುಕಿನಲ್ಲಿ ವೈಯಕ್ತಿಕ ಬದುಕಿನ ಪರಿಪೂರ್ಣತೆಯನ್ನು ಕಾಣಬಲ್ಲವನೇ ಸುಖಿ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"To see one's growth in the growth of the world. To wander one's soul freely in the streets of the world. To see the completeness of life only among all the other life in this world. A person who is able to do the above will be happy." - Mankutimma
Video Coming Soon
Detailed video explanations by scholars and experts will be available soon.