Mankutimmana Kagga by D.V. Gundappa
ಗರ್ವಪಡದುಪಕಾರಿ, ದರ್ಪ ಬಿಟ್ಟಧಿಕಾರಿ । ನಿರ್ವಿಕಾರದ ನಯನದಿಂ ನೋಳ್ಪುದಾರಿ ॥ ಸರ್ವಧರ್ಮಾಧಾರಿ, ನಿರ್ವಾಣಸಂಚಾರಿ । ಉರ್ವರೆಗೆ ಗುರುವವನು - ಮಂಕುತಿಮ್ಮ ॥ ೮೦೬ ॥
garvapaDada upakAri, darpa biTTa adhikAri । nirvikArada nayanadim nOLpa udAri ॥ sarvadharma aadhAri, nirvANa sanchAri । urvarege guruvavanu - Mankutimma ॥ 806 ॥
ಉಪಕಾರ ಮಾಡಿ ತಾನು ಮಾಡಿದೆನೆಂಬ ಗರ್ವ ಪಡದವನು, ಅಧಿಕಾರವಿದ್ದರೂ ದರ್ಪವನು ತೋರದವನು, ನಿರ್ವಿಕಾರದಿಂದ ಜಗವನ್ನು ನೋಡುವ ಉದಾರಿ, ಎಲ್ಲ ಧರ್ಮಗಳನ್ನೂ ಧರಿಸಿರುವವನು ಮತ್ತು ಮಾನಸಿಕವಾಗಿ ಪರತತ್ವದಲ್ಲಿ ನಿಂತು ನಿರ್ವಾಣದಲ್ಲಿರುವವನು ಈ ಜಗತ್ತಿಗೆ ಗುರುವಂತೆ ಇರುವನು ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು.
"One who can help without feeling proud about it; an officer who does not throw his weight around; a benevolent person who can see the world as-is without any distortion; a person who respects and supports all dharma (religion); a person whose moves around searching for salvation. - all these people can become teachers of the world." - Mankutimma
Video Coming Soon
Detailed video explanations by scholars and experts will be available soon.