Mankutimmana Kagga by D.V. Gundappa
ಪೌರುಷಾಶ್ವಕ್ಕಾಶೆ ಛಾಟಿ, ಭಯ ಕಡಿವಾಣ । ಹಾರಾಟವದರದಾ ವೇಧೆಗಳ ನಡುವೆ ॥ ಧೀರನೇರಿರೆ, ಹೊಡೆತ ಕಡಿತವಿಲ್ಲದೆ ಗುರಿಗೆ । ಸಾರುವುದು ನೈಜದಿಂ - ಮಂಕುತಿಮ್ಮ ॥ ೮೧೫ ॥
pauruShAshvakke aashe ChATi, bhaya kaDivANa । kArATavu adaradu aa vEdhegaLa naDuve ॥ dhIranu Eridare, hoDeta kaDitavillade gurige । sAruvudu naijadim - Mankutimma ॥ 815 ॥
ಹುಮ್ಮಸ್ಸಿನಿಂದ ಶಕ್ತಿಯುತವಾಗಿ ಮುನ್ನುಗ್ಗುವ ಮನಸ್ಸೆಂಬ ಕುದುರೆಗೆ ಆಸೆಯೇ ಚಾವಟಿ ಮತ್ತು ಭಯವೇ ಕಡಿವಾಣ. ಬದುಕಿನಲ್ಲಿ ಬರುವ ಸುಖ ಸಂತೋಷಗಳು,ನೋವು ವೇದನೆಗಳ ನಡುವೆ ಇದರ ಹಾರಾಟ. ಆದರೆ ಧೀರನಾದವನು, ವಿವೇಕವಂತನಾದವನು ಆ ಕುದುರೆಯನ್ನು ಏರಿದರೆ, ಈ ಚಾವಟಿಯ ಹೊಡೆತ ಅಥವಾ ಕಡಿವಾಣದ ಹಿಡಿತಗಳಿಲ್ಲದೆ, ತನ್ನ ಗುರಿಯತ್ತ ಸಹಜವಾಗಿ ಸಾಗುವುದು ಎಂದು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"For a horse names 'human endeavor', desire is a whip and fear is a chain. Its misery is dealing between both at the same time - the whip and the chain. But is a brave man rides it, the horse neither needs a whip not a chain. It can reach its goal naturally. " - Mankutimma
Video Coming Soon
Detailed video explanations by scholars and experts will be available soon.