Back to List

Kagga 801 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಕೋಡುಗಲ್ಲನು ಹತ್ತಿ ದೂರವನು ನೋಳ್ಪಂಗೆ । ಗೋಡೆಗೊತ್ತುಗಳೇನು? ಮೇಡು ಕುಳಿಯೇನು? ॥ ನೋಡು ನೀನುನ್ನತದಿ ಜನಜೀವಿತವ । ಮಾಡುದಾರದ ಮನವ - ಮಂಕುತಿಮ್ಮ ॥ ೮೦೧ ॥

kODugallanu hatti dUravanu nOLpange । gODe gottugaLEnu? mEDu kuLiyEnu? ॥ nODu nInu unnatadi jana jIvitava । mADu udArada manava - Mankutimma ॥ 801 ॥

Meaning in Kannada

ಎತ್ತರದ ಕೋಡುಗಲ್ಲನ್ನು ಹತ್ತಿ, ಅಲ್ಲಿಂದ ಕೆಳಗೆ ನೋಡುವವನಿಗೆ, ಕೆಳಗೆ ಕಟ್ಟಿರುವ ಗೋಡೆಗಳಾಗಲೀ, ಗೂಟಗಳಾಗಲೀ, ಗುಡ್ದಗಳಾಗಲೀ, ಹಳ್ಳಗಳಾಗಲೀ ಹೇಗೆ ಬಿಡಿಬಿಡಿಯಾಗಿ ಕಾಣುವುದಿಲ್ಲವೋ, ಹಾಗೆಯೇ ನೀನು ಅರಿವಿನ ಉನ್ನತದಿ ನಿಂತು ಉದಾರವಾದ ಮನಸ್ಸಿನಿಂದ ಜನರ ಜೀವಿತವ ನೋಡು ಎಂದು ಆದೇಶಿಸಿದ್ದಾರೆ ಮಾನ್ಯ ಗುಂಡಪ್ಪನವರು.

Meaning & Interpretation

"If one climbs up a hill and looks far, he can not make out the details of the topology below - walls, signs on the wall, gardens, holes. Likewise, we all should reach a higher state of being where the petty differences in people and other life don't matter any more. Let your mind expand to such a wide inclusive consciousness." - Mankutimma

Themes

LifeSociety

Video Section

Video Coming Soon

Detailed video explanations by scholars and experts will be available soon.