Mankutimmana Kagga by D.V. Gundappa
ಹರ್ಮ್ಯಾಗ್ರಕೇರಿ ಸೋಪಾನದಿನತೀತನಹೆ । ನಿರ್ಮಮತೆಗೇರಿ ಕರ್ಮಾತೀತನಪ್ಪೆ ॥ ಬ್ರಹ್ಮಪದದಿಂದ ಧರ್ಮಾಧರ್ಮಳ ನಿಯಮ । ನಿರ್ಮಾಲ್ಯವಾಗುವುದು - ಮಂಕುತಿಮ್ಮ ॥ ೮೦೨ ॥
harmyAgrake eri sOpAnadina atItanahe । nirmamatege eri karma atItanappe ॥ brahmapadadinda dharma adharmagaLa niyama । nirmAlyavAguvudu - Mankutimma ॥ 802 ॥
ಉಪ್ಪರಿಗೆಯನ್ನು ಏರಿದಮೇಲೆ, ಅದನ್ನೇರಲು ಬಳಸಿದ ಮೆಟ್ಟಿಲುಗಳಿಗೆ ನೀನು ಅತೀತನಾಗುವೆ. ಮಮಕಾರವನ್ನು ತೊರೆದರೆ, ಕರ್ಮಕ್ಕೆ ಅತೀತನಾಗಿ ನಿಲ್ಲುವೆ. ಅದೇ ರೀತಿ ಬ್ರಹ್ಮಜ್ಞಾನದ ಉತ್ತುಂಗ ಸ್ಥಿತಿಗೆ ತಲುಪಿದ ನಂತರ ಧರ್ಮ ಮತ್ತು ಅಧರ್ಮದ ನಿಯಮಗಳಿಗೆಲ್ಲ ಅತೀತನಾಗುವೆ. ಹೀಗೆ ಮೇಲೇರಲು ಬಳಸಿದ, ಮೆಟ್ಟಿಲು, ಕರ್ಮಗಳು ಮತ್ತು ಧರ್ಮಾಧರ್ಮದ ನಿಯಮಗಳು, ಹಿಂದಿನ ದಿನ ದೇವರಿಗೆ ಅಲಂಕಾರಕ್ಕಾಗಿ ಇಡಲ್ಪಟ್ಟ ಹೂಗಳನ್ನು, ಮರುದಿನ ನೈರ್ಮಾಲ್ಯವೆಂದು ತೆಗೆದುಹಾಕುವಂತೆ, ಎಂದು ಒಂದು ಅದ್ಭುತವಿಚಾರವನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"For a person who has already climbed to the upper rooms, there is no use of the stairs. If a person is already detached from everything, then his actions will not any implications (of sin or otherwise). Once a person has reached the supreme consciousness, petty discussions on morality stop bothering him. They are as important as discarded flowers (waste) after worship." - Mankutimma
Video Coming Soon
Detailed video explanations by scholars and experts will be available soon.