Mankutimmana Kagga by D.V. Gundappa
ಹಣ್ಣೇನು ಕಾಯೇನು ಹೊಟ್ಟೆ ತುಂಬಿರುವಂಗೆ? । ಪುಣ್ಯವೇಂ ಪಾಪವೇಂ ಪೂರ್ಣದರ್ಶನಿಗೆ? ॥ ಉನ್ನತ ಶಿಖರದಿಂ ತಿಟ್ಟೇನು ಕುಳಿಯೇನು? । ಪೂರ್ಣತೆಗೆ ಸೊಟ್ಟೇನು? - ಮಂಕುತಿಮ್ಮ ॥ ೮೦೦ ॥
haNNEnu kAyEnu hoTTe tumbiruvange? । puNyavEm pApavEm pUrNadarshanige? ॥ unnata shikharadiM tiTTEnu kuLiyEnu? । pUrNatege soTTenu? - Mankutimma ॥ 800 ॥
ಹೊಟ್ಟೆ ತುಂಬಿ, ಬೇರೇನೂ ತಿನ್ನಲು ಇಷ್ಟಪಡದವನಿಗೆ ಹಣ್ಣಾದರೇನು? ಕಾಯಾದರೇನು? ಪರತತ್ವದ ಪೂರ್ಣ ದರ್ಶನವಾದವನಿಗೆ ಪಾಪವೇನು? ಪುಣ್ಯವೇನು? ಎತ್ತರದ ಬೆಟ್ಟದಲ್ಲಿ ನಿಂತು ನೋಡುವವನಿಗೆ ಕೆಳಗಿನ ಭೂಭಾಗದಲ್ಲಿರುವ ಹಳ್ಳ ದಿಣ್ಣೆಗಳು ಸಮನಾಗಿ ಕಾಣುವಂತೆ ಪೂರ್ಣತೆಯನ್ನು ಸಾಧಿಸಿದವನಿಗೆ ಯಾವುದೂ ಸೊಟ್ಟಗೆ ಕಾಣುವುದಿಲ್ಲ ಎಂದು ಹೇಳುತ್ತಾರೆ ಈ ಮುಕ್ತಕದಲ್ಲಿ.
It does not matter whether the fruit is ripe or not for a person whose stomach is filled. For a person who has realized the complete truth, there is no sin or good karma. When viewed from a high position (mountaintop), mounds and holes in the groubd below cannot be seen. There can not be anything missing (or crooked) in the complete. - Mankutimma
Video Coming Soon
Detailed video explanations by scholars and experts will be available soon.