Mankutimmana Kagga by D.V. Gundappa
ಘೋರವನು ಮೋಹವನು ದೇವತೆಗಳಾಗಿಪರು । ಭೀರು ಯಾಚಕರಾಸ್ಥೆ ತಪ್ಪದಿರಲೆಂದು ॥ ಆರಿಂದಲೇಂ ಭೀತಿ, ಏಂ ಬಂದೊಡದ ಕೊಳುವ । ಪರಮಾರ್ಥಿಕನಿಗೆಲೊ? - ಮಂಕುತಿಮ್ಮ ॥ ೭೯೯ ॥
ghOravanu mOhavanu dEvategaLu aagiparu । bhIru yAchakara aasthe tappadiralendu ॥ ArindalEm bhIti, Em bandoDe ada koLuva । paramArthikanigelo? - Mankutimma ॥ 799 ॥
ಭಯಪಡುವ ಮತ್ತು ಯಾಚಕರಾದ ಜನರು ತಮ್ಮಲ್ಲಿ ಆಸ್ಥೆ ಮತ್ತು ಶ್ರದ್ಧೆಗಳನ್ನು ಎಲ್ಲಿ ಕಳೆದುಕೊಂಡುಬಿಡುವರೋ ಎಂದು ದೇವತೆಗಳು, ಭುವಿಯ ಮನುಜರಿಗೆ ಮೋಹವನ್ನು ಮತ್ತು ಆ ಮೋಹದಿಂದುಂಟಾಗುವ ಘೋರವಾದ ಕಷ್ಟಗಳನ್ನುನೀಡುತ್ತಾರೆ. ಆದರೆ ಏನೇ ಬಂದರೂ ತೆಗೆದುಕೊಳ್ಳುತ್ತೇನೆ, ಒಪ್ಪಿಕೊಳ್ಳುತ್ತೇನೆ ಮತ್ತು ತಡೆದುಕೊಳ್ಳುತ್ತೇನೆ ಎನ್ನುವ ಧೋರಣೆಯನ್ನು ಪಾಲಿಸುವ ಪಾರಮಾರ್ಥವನ್ನು ನಂಬಿಕೊಂಡವನಿಗೆ ಯಾರಿಂದಲೂ ಭೀತಿಯಿರುವುದಿಲ್ಲ ಎಂದು ವಿಮರ್ಶಿಸಿದ್ದಾರೆ ಮಾನ್ಯ ಗುಂಡಪ್ಪನವರು.
Gods will create fear and desire in us. This is to prevent the coward and pitiful people astray from God's path. If a person is ready to take anything that fate throws at him - what should he be afraid of? - Mankutimma
Video Coming Soon
Detailed video explanations by scholars and experts will be available soon.