Back to List

Kagga 798 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ನೈರಾಶ್ಯನಿರತಂಗೆ ದೇವತೆಗಳಿಂದೇನು? । ವೈರಾಗ್ಯಪಥಿಕಂಗೆ ನಷ್ಟಭಯವೇನು? ॥ ಪಾರಂಗತಂಗಂತರಾಳ ದೂರಗಳೇನು? । ಸ್ವೈರಪಥವಾತನದು - ಮಂಕುತಿಮ್ಮ ॥ ೭೯೮ ॥

nairAshya niratange dEvategaLindEnu? । vairAgya pathikange naShTabhayavEnu? ॥ pArangatange antarALa dUragaLEnu? । svaira pathavAtanadu - Mankutimma ॥ 798 ॥

Meaning in Kannada

ನಿರಾಶೆಯಿಂದ ಕೂಡಿದವನಿಗೆ ದೇವತೆಗಳಿಂದ ಏನಾಗಬೇಕು? ವೈರಾಗ್ಯದ ಹಾದಿಯಲ್ಲಿ ನಡೆಯುವವನಿಗೆ ನಷ್ಟದ ಭಯವೆಲ್ಲಿರುವುದು? ಅಂತರಂಗದಲ್ಲಿ ಪರತತ್ವವನ್ನು ಅನುಸಂಧಾನ ಮಾಡುವವಗೆ, ಯಾವ ದೂರವೂ ದೊಡ್ಡದಲ್ಲ. ಈ ಮೂರೂ ರೀತಿಯ ಜನರದು ‘ಸ್ವ-ಇಚ್ಚೆ’ ಯ ಹಾದಿ ಎಂದು ವಿಮರ್ಶೆಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Does a pessimist have anything to ask of the Gods? Does an ascetic ever afraid of any loss? For a person who has understood it all (universal truth), is there any difference between near or far? He is the master of his own path. - Mankutimma

Themes

DevotionWisdom

Video Section

Video Coming Soon

Detailed video explanations by scholars and experts will be available soon.