Mankutimmana Kagga by D.V. Gundappa
ಸುಟ್ಟ ಹಗ್ಗದ ಬೂದಿ ರೂಪಮಾತ್ರದಿ ಹಗ್ಗ । ಗಟ್ಟಿ ಜಗವಂತು ತತ್ತ್ವಜ್ಞಾನ ಸೋಕೆ ॥ ತೊಟ್ಟಿಹುದು ಲೋಕರೂಪವ, ತಾತ್ತ್ವಿಕನ ವೃತ್ತಿ । ಕಟ್ಟದವನಾತ್ಮವನು - ಮಂಕುತಿಮ್ಮ ॥ ೭೯೭ ॥
suTTa haggada bUdi rUpamAtradi hagga । gaTTi jagavantu tattva jnAna sOke ॥ toTTihudu lOkarUpava, tAttvikana vRutti । kaTTadu avu avana aatmavanu - Mankutimma ॥ 797 ॥
ಒಂದು ಹಗ್ಗವನ್ನು ಸುಟ್ಟ ನಂತರ ಅದರ ಬೂದಿ ಹಗ್ಗದ ಆಕಾರದಲ್ಲಿ ಇದ್ದರೂ ಹಗ್ಗವಾಗಿರದೆ ಇರುವಂತೆ, ತತ್ವಜ್ಞಾನದ ಬೆಂಕಿಯ ಸ್ಪರ್ಶವಾದ ತತ್ವಶಾಸ್ತ್ರಜ್ಞನು ಲೌಕಿಕನಂತೆ ಕಂಡರೂ ಈ ಜಗತ್ತು ಅವನನ್ನು ತನ್ನತ್ತ ಸೆಳೆಯುವುದರಲ್ಲಿ ವಿಫಲವಾಗುತ್ತದೆ ಎಂದು ತತ್ವಜ್ಞಾನಿಯ ಪರಿಯನ್ನು ಅರುಹಿದ್ದಾರೆ ನಮಗೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
A burnt rope just looks like a rope. It does not have the strenght of the rope. The world as we see it is also like that. It is only strong only when one has the knowledge of the universal truth. - Mankutimma
Video Coming Soon
Detailed video explanations by scholars and experts will be available soon.