Mankutimmana Kagga by D.V. Gundappa
ಸರಿ ಹದದ ಕಾಳು ತಿರೆಯಪ್ಪಿದೊಡೆ ಮೊಳೆಯುವುದು । ಹುರಿದೊಡದು ಮೊಳೆಯದರಳಹುದು ಬಾಯ್ಸವಿಗೆ ॥ ಪರಮತತ್ತ್ವಜ್ಞಾನಿಯೊಡರಿಸುವ ಕರುಮಗಳು । ಮರುಬೆಳೆಗೆ ಬಿತ್ತಲ್ಲ - ಮಂಕುತಿಮ್ಮ ॥ ೭೯೬ ॥
sari hadada kALu tire appidoDe moLeyuvudu । huridoDe adu moLeyadu araLahudu bAy savige ॥ parama tattva jnAniyoDarisuva karumagaLu । marubeLege bittalla - Mankutimma ॥ 796 ॥
ಸರಿಯಾಗಿ ಹದವಾದ ಕಾಳು ಭೂಮಿಯ ಸಂಸರ್ಗದಿಂದ ಸಸಿಯಾಗಿ ಮೊಳೆಯುವುದು. ಆದರೆ ಅದೇ ಕಾಳನ್ನು ಹುರಿದುಬಿಟ್ಟರೆ ಅದು ಅರಳಾಗಿ ಬಾಯ ರುಚಿಗೆ ದಕ್ಕುತ್ತದೆ. ಪರಮತತ್ವವನ್ನು ಪ್ರತಿಪಾದಿಸುವ ಮತ್ತು ಅನುಸರಿಸುವ ತತ್ವಜ್ಞಾನಿಯ ಕರ್ಮಗಳು ಮುಕ್ತಿಗೆ ಹೊರತು ಮರು ಜನ್ಮಕ್ಕಲ್ಲ ಎಂದು ಜಗದ ಅಂಟು ಮತ್ತು ಅಂಟಿಲ್ಲದ ಸ್ಥಿತಿಗಳ ವಿಶ್ಲೇಷಣೆಯನ್ನು ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
If the right seed is sown into a receptive ground, a sapling sprouts. But if you fry it, it will not sprout but pops open and becomes a tasty snack. Actions performed by a person with the knowledge of universal truth will not result in cycle of actions and reactions. It is a seed that will not be sown again. - Mankutimma
Video Coming Soon
Detailed video explanations by scholars and experts will be available soon.