Back to List

Kagga 795 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಮೊಳೆವ ಸಸಿಯೊಳು ನಾನು, ತೊಳಗುವಿನನೊಳು ನಾನು । ಬೆಳೆವ ಶಿಶುವೊಳು ನಾನು, ಕೆಳೆನೋಟ ನಾನು ॥ ಕಳಕಳಿಸುವೆಲ್ಲಮುಂ ನಾನೆಂದು ಭಾವಿಸುತೆ । ಒಳಗೂಡು ವಿಶ್ವದಲಿ - ಮಂಕುತಿಮ್ಮ ॥ ೭೯೫ ॥

moLeva sasiyoLu nAnu, toLaguva inanoLu nAnu । beLeva shishuvoLu nAnu, keLeNOTa nAnu ॥ kaLakaLisuva ellamum nAnendu bhAvisute । oLagUDu vishvadali - Mankutimma ॥ 795 ॥

Meaning in Kannada

ಮೊಳೆಯುವ ಸಸಿಯಲ್ಲಿ ನಾನು, ಬೆಳಗುವ ಪ್ರಭೆಯಲ್ಲಿ ನಾನು ಬೆಳೆವ ಶಿಶುವಿನಲ್ಲಿ ನಾನು, ಸ್ನೇಹಭಾವದಲ್ಲಿ ನಾನು, ಜಗತ್ತಿನ ಎಲ್ಲ ಜನರ ಕಳಕಳಿಯಲ್ಲಿ ನಾನು, ನಾನೆಂಬ ಭಾವದಿಂದ ಜಗತ್ತಿನಲ್ಲಿ ನೀನು ಒಂದಾಗು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

You must feel that you are one with the world. See oneself in a seed that this sprouting to become a sapling, in the rising sun, in a growing child, in the looks of friends. You must feel one with anything that evokes emotion. - Mankutimma

Themes

LifeDeathMoralitySocietySelfLove

Video Section

Video Coming Soon

Detailed video explanations by scholars and experts will be available soon.