Back to List

Kagga 794 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಮನಸು ಬೆಳೆಯಲಿ ಭುಜಿಸಿ ನೂರು ನೂರನುಭವವ । ಹೊನಲು ನೂರೀ ಬಾಳ ಕಡಲನುಬ್ಬಿಸಲಿ ॥ ತನುಬಂಧ ಕಳಚಿ, ಜೀವವಖಂಡಚೇತನದ । ಕುಣಿತದಲಿ ಕೂಡಿರಲಿ - ಮಂಕುತಿಮ್ಮ ॥ ೭೯೪ ॥

manasu beLeyali bhujisi nUru nUru anubhavava । honalu nUru ee bALa kaDalanu ubbisali ॥ tanubandha kaLachi, jIvavu akhanDa chEtanada । kuNitadali kUDirali - Mankutimma ॥ 794 ॥

Meaning in Kannada

ನೂರಾರು ನದಿಗಳು ಬಂದು ಸೇರಿ ಕಡಲು ಉಬ್ಬುವಂತೆ, ಬಾಳಿನಲ್ಲಿ ಮನಸ್ಸಿನ ಕಡಲೂ ಸಹ ನೂರಾರು ಅನುಭವಗಳ ಮಹಾಪೂರದಿಂದ ಬೆಳೆಯಬೇಕು, ವಿಕಾಸಗೊಳ್ಳಬೇಕು. ದೇಹದ ವ್ಯಾಮೋಹವನ್ನು ತೊರೆದು ಪರಬ್ರಹ್ಮವಸ್ತುವಿನ ತಾಂಡವದೊಡಗೂಡಿ, ನಿನ್ನ ಆತ್ಮವೂ ಸಂಭ್ರಮಿಸಲಿ ಎಂದು ಒಂದು ಅದ್ಭುತವಿಚಾರವನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Let the mind expand with hundreds and hundreds of experiences. Let the light from these experiences expand the seas of life. Once the attachment towards body is lost, life dances with the universal cosmic spirit. - Mankutimma

Themes

LifeWar

Video Section

Video Coming Soon

Detailed video explanations by scholars and experts will be available soon.