Mankutimmana Kagga by D.V. Gundappa
ಆಶೆಗಳ ಕೆಣಕದಿರು, ಪಾಶಗಳ ಬಿಗಿಯದಿರು । ಕ್ಲೇಶದ ಪರೀಕ್ಷೆಗಳಿಗೆನ್ನ ಕರೆಯದಿರು ॥ ಬೇಸರದ ಪಾತಕಸ್ಮೃತಿಯ ಚುಚ್ಚದಿರ್: ಎನ್ನು- । ತೀಶನನು ಬೇಡುತಿರೊ - ಮಂಕುತಿಮ್ಮ ॥ ೭೯೨ ॥
aashegaLa keNakadiru, pAshagaLa bigiyadiru । klEshada parIkShegaLige enna kareyadiru ॥ bEsarada pAtaka smRutiya chucchadir: ennuta । eeshananu bEDutiro - Mankutimma ॥ 792 ॥
" ಹೇ ಪರಮಾತ್ಮ, ನನ್ನಲ್ಲಿ ಆಸೆಗಳು ಉಂಟಾಗದಂತೆ ಮಾಡು , ಜೀವನದ ಬಂಧಗಳಿಂದ ಬಿಗಿಯಲ್ಪಡದಂತೆ ಮಾಡು. ಬದುಕಿನ ಕಷ್ಟತರವಾದ ಪರೀಕ್ಷೆಗಳಿಗೆನ್ನ ಗುರಿಮಾಡದಿರು. ಗತಿಸಿಹೋದ ಕಾಲದಲ್ಲಿ ನಾನು ಮಾಡಿದ ಪಾಪಗಳ ನೆನಪು ನನಗೆ ಇಲ್ಲದಂತಾಗುವಂತೆ ಕರುಣಿಸು" ಎಂದು ಸದಾಕಾಲ ಆ ಜಗದ್ರಕ್ಷಕನನ್ನು ಬೇಡುತ್ತಿರು ಎಂದು ತಮಗೆ ತಾವೇ ಹೇಳಿಕೊಳ್ಳುತ್ತಾ, ನಮಗೂ ಯಾವ ಮಾರ್ಗ ಅನುಸರಣೀಯ ಎಂದು ತೋರಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
You must ask God this - Don't provoke me with desires. Don't tie me up with attachments. Don't present me tough dilemmas to choose from. Don't remind me of hurting memories. - Mankutimma
Video Coming Soon
Detailed video explanations by scholars and experts will be available soon.