Mankutimmana Kagga by D.V. Gundappa
ದಿನದಿನವು ಕುಸಿದು ಕಟ್ಟಿಸಿಕೊಳುವ ಗುಡಿ ವಿಶ್ವ । ಜನರೆಲ್ಲರಾಗುಡಿಯ ಕೆಲಸದಾಳುಗಳು ॥ ಮನೆಯೇನು? ನಾಡೇನು? ಕುಲವೇನು? ಮಠವೇನು? । ಎಣಿಸೆಲ್ಲವದೆಯೆಂದು - ಮಂಕುತಿಮ್ಮ ॥ ೭೯೧ ॥
dinadinavu kusidu kaTTisikoLuva guDi vishva । janarellaru aa guDiya kelasadALugaLu ॥ maneyEnu? nADEnu? kulavEnu? maThavEnu? । eNisellavu ade endu - Mankutimma ॥ 791 ॥
ಪ್ರತಿನಿತ್ಯವೂ ಕುಸಿದು ಬಿದ್ದು ಮತ್ತೆ ಮತ್ತೆ ಕಟ್ಟಲ್ಪಡುವುದೇ ಈ ಜಗತ್ತೆಂಬ ದೇವಾಲಯ. ಕೆಡವುವ ಮತ್ತು ಕಟ್ಟುವ ಕೆಲಸದಲ್ಲಿ ಎಲ್ಲಾ ಜನರೂ ಕೆಲಸದಾಳುಗಳು. ಮನೆ, ನಾಡು, ಕುಲ, ಮಠ ಹೀಗೆ ಎಲ್ಲದರಲ್ಲೂ ಮತ್ತು ಎಲ್ಲವೂ ಆ ಪರಮಾತ್ಮನೆಂದು ತಿಳಿದುಕೋ ಎಂದು, ಗುಂಡಪ್ಪನವರು ಆದೇಶಿಸಿದ್ದಾರೆ ನಮಗೆ ಈ ಮುಕ್ತಕದಲ್ಲಿ.
This world is a temple that gets destroyed and built again every day. All the people are servants at that temple. A house, a state, a family or a religion - everything is insignificant in comparison. Everything is just a part of the same world which undergoes change every day. - Mankutimma
Video Coming Soon
Detailed video explanations by scholars and experts will be available soon.