Back to List

Kagga 790 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಏನಾನುಮಂ ಮಾಡು ಕೈಗೆ ದೊರೆತುಜ್ಜುಗವ । ನಾನೇನು ಹುಲ್ಲುಕಡ್ಡಿಯೆಂಬ ನುಡಿ ಬೇಡ ॥ ಹೀನಮಾವುದುಮಿಲ್ಲ ಜಗದ ಗುಡಿಯೂಳಿಗದಿ । ತಾಣ ನಿನಗಿಹುದಲ್ಲಿ - ಮಂಕುತಿಮ್ಮ ॥ ೭೯೦ ॥

EnAnumam mADu kaige doreta ujjugava । nAnEnu hullu kaDDI yemba nuDi bEDa ॥ hInam aavudum illa jagada guDiyULigadi । tANa ninagihudalli - Mankutimma ॥ 790 ॥

Meaning in Kannada

ಕೈಗೆ ಸಿಕ್ಕ ಯಾವುದಾದರೂ ಉದ್ಯೋಗವನ್ನು ಮಾಡು. ‘ನಾನು ಹುಲುಮಾನವ, ನನ್ನ ಕೈಲೇನಾಗುತ್ತದೆ’ ಎನ್ನುವ ಮಾತನ್ನು ಆಡಬೇಡ. ಈ ಜಗತ್ತೆಂಬ ದೇವಾಲಯದಲ್ಲಿ ಯಾವ ಕೆಲಸವೂ ಹೀನವಾದ ಕೆಲಸವಿಲ್ಲ. ನಿನಗೂ ಏನಾದರೂ ಕೈಂಕರ್ಯ, ಕೆಲಸ ಮಾಡಲು ಅವಕಾಶವಿದೆ ಎಂದು ಹೇಳುತ್ತಾ ಜಗತ್ತಿನಲ್ಲಿ ಸೃಷ್ಟಿಯಾದ ಪ್ರತೀ ವಸ್ತುವಿಗೂ ಒಂದು ಪ್ರಯೋಜವಿದೆ ಎಂಬ ಸತ್ಯವನ್ನು ಪ್ರಕಾಶಿಸಿದ್ದಾರೆ ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ.

Meaning & Interpretation

Do something. Any work that you can find is good enough. Never belittle yourself (by comparing yourself to a blade of grass). In this world, there is no work that is inferior. There is a place for every job. - Mankutimma

Themes

LifeMoralitySelfDuty

Video Section

Video Coming Soon

Detailed video explanations by scholars and experts will be available soon.