Back to List

Kagga 789 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು । ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ ॥ ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ । ಎಲ್ಲರೊಳಗೊಂದಾಗು - ಮಂಕುತಿಮ್ಮ ॥ ೭೮೯ ॥

hullAgu beTtadaDi, manege malligeyAgu । kallAgu kaShTagaLa maLeya vidhi suriye ॥ bella sakkareyAgu dIna durbalaringe । ellaroLu ondAgu - Mankutimma ॥ 789 ॥

Meaning in Kannada

ನೀನು, ಬೆಟ್ಟದಡಿ ದನಕರುಗಳಿಗೆ ಮೇವಾಗುವಂತಹ ಹುಲ್ಲಾಗು, ನಿನ್ನ ಮನೆಗೆ ಸುವಾಸನಾಭರಿತವಾದ ಮಲ್ಲಿಗೆಯ ಹೂವಂತಾಗು, ವಿಧಿ ನಿನ್ನ ಬದುಕಿನಲ್ಲಿ ಕಷ್ಟಗಳನ್ನು ಮಳೆಯಂತೆ ಸುರಿದರೆ, ನೀ ಕಲ್ಲಂತೆ ಗಟ್ಟಿಯಾಗಿ ಅವುಗಳನ್ನು ಎದುರಿಸು , ದೀನರಿಗೆ ದುರ್ಬಲರಿಗೆ ನೀನು ಬೆಲ್ಲದಂತಾಗು, ಎಲ್ಲರೊಳು ಒಂದಾಗು ಎಂದು ಸ್ವಾರಸ್ಯಕರ ಬದುಕಿನ ಗುಟ್ಟನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Be like a blade of grass at the bottom of a mountain. It leads a peaceful life by itself, offers solace to people who foot hurt while climbing down, it survives winds which even big trees can not. Be like a fragrant flower to your own household. Always spread smiles and happiness. Be like a stone when providence showers rains of trouble on you. Be like jaggery and sugar to the weak and people in need of your help. Be one among everybody. - Mankutimma

Themes

LifeSufferingNatureSocietySelfPeace

Video Section

Video Coming Soon

Detailed video explanations by scholars and experts will be available soon.