Mankutimmana Kagga by D.V. Gundappa
ಜ್ವರ ಬಂದು ತನು ಬೆಂದ ಯಾತನೆಯ ಮಾತೇನು? । ಉರಿಬೇಗೆಯಿಳಿಯೆ ಹೊಸ ಹೊಸಬನಾ ನರನು ॥ ಕರಣತಪನೆಗಳಿಳಿಯೆ, ಕಾರಣವದೇನಿರಲಿ । ಮರುಜನ್ಮವಾತ್ಮಂಗೆ - ಮಂಕುತಿಮ್ಮ ॥ ೭೮೮ ॥
jvara bandu tanu bendu yAtaneya mAtEnu? । uri bEgegaLu iLiye hosa hosabanA naranu ॥ karaNa tapanegaLu iLiye, kAraNavadEnirali । marujanmavu aatmange - Mankutimma ॥ 788 ॥
ಜ್ವರ ಬಂದು ತನು ಎಂದರೆ ದೇಹ ಆ ಜ್ವರದ ತಾಪದಿಂದ ಬೆಂದು ಯಾತನೆಯನ್ನು ಅನುಭವಿಸಿದ ನಂತರ, ಆ ಜ್ವರ, ಕಡಿಮೆಯಾಗಿ ಚೇತರಿಸಿಕೊಳ್ಳುವಾಗ ಒಂದು ರೀತಿಯ ಹೊಸತನದ, ಅನುಭವವಾಗುತ್ತದೆಯಲ್ಲವೇ, ಅದೇ ರೀತಿ ವಾಂಛೆಗಳಿಂದ ಉಂಟಾದ ಬೇಗೆಯೂ ಅಡಗಿ ಅಂದ್ರಿಯಗಳು ಶಾಂತವಾದರೆ ಮನುಷ್ಯನಿಗೆ ಅದು ಮರುಜನ್ಮದ ರೀತಿ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
What can be said about the misery when fever batters the body? But when the misery subsides, we feel like in a new body. Just like that by whatever means, when the senses come back into our control, it feels like a new birth to the soul. - Mankutimma
Video Coming Soon
Detailed video explanations by scholars and experts will be available soon.