Back to List

Kagga 783 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಬುದ್ಧಿಮಾತಿದು ನಿನಗೆ; ಸಿದ್ಧನಿರು ಸಕಲಕ್ಕಂ । ಎದ್ದು ಕುಣಿಯಲಿ ಕರ್ಮ; ದೈವ ನಿದ್ರಿಸಲಿ ॥ ಅದ್ಭುತಗಳರಿದಲ್ಲ; ಭವ್ಯಕ್ಕೆ ಹದ್ದಿಲ್ಲ । ಸಿದ್ಧನಾಗೆಲ್ಲಕಂ - ಮಂಕುತಿಮ್ಮ ॥ ೭೮೩ ॥

buddhi mAtidu ninage; siddhaniru sakalakkam । eddu kuNiyali karma; daiva nidrisali ॥ adbhutagaLu aridalla; bhavyakke haddilla । siddhanAgu ellakam - Mankutimma ॥ 783 ॥

Meaning in Kannada

ನೀ ಮಾಡಿದ ಕರ್ಮಾನುಸಾರ ನಿನ್ನ ಜೀವನ ಎಷ್ಟೇ ಏರುಪೇರಾಗಲಿ ಅಥವಾ ದೈವದ ಸಹಾಯ ನಿನಗೆ ಇಲ್ಲದಿರಲಿ. ನಿನಗೆ ಇದು ಬುದ್ಧಿಮಾತು, ಕೇಳಿಕೋ ಎಲ್ಲಕ್ಕೂ ಸಿದ್ಧನಿರು. ಜಗತ್ತಿನಲ್ಲಿ ಪವಾಡಗಳು ಮತ್ತು ಅದ್ಭುತಗಳು ಅಪರೂಪವಲ್ಲ ಮತ್ತು ಪರಮಾತ್ಮನ ಶಕ್ತಿಗೆ ಮಿತಿಯೇ ಇಲ್ಲ, ಹಾಗಾಗಿ ನೀನು ಎಲ್ಲದಕ್ಕೂ ಸಿದ್ಧನಾಗಿರು ಎಂದು ಧೈರ್ಯದಿಂದ ಬದುಕಬೇಕಾದ ಮನಸ್ತತ್ವವನ್ನು ಹೇಗೆ ರೂಢಿಸಿಕೊಳ್ಳಬೇಕೆಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು.

Meaning & Interpretation

This is a wise advice to you: Be prepared for everything. Your karma will come back to you in full force - good or bad. You cannot control it. You will pray God for relief. But He may not listen. On the other hand, miracles can happen. It's not unheard of. There is no limit for magnanimity. Be prepared for everything. - Mankutimma

Themes

DevotionMoralityFate

Video Section

Video Coming Soon

Detailed video explanations by scholars and experts will be available soon.