Mankutimmana Kagga by D.V. Gundappa
ಅಂದಿಗಂದಿನ ಕೆಲಸ, ಸಂದನಿತರಲಿ ತೃಪ್ತಿ । ಕುಂದದುಬ್ಬದ ಮನಸು ಬಂದುದೇನಿರಲಿ ॥ ಬಂಧು ಮತಿ ಲೋಕದಲಿ, ಮುನ್ ದೃಷ್ಟಿ ಪರಮದಲಿ । ಹೊಂದಿರಲಿವದು ಪುಣ್ಯ - ಮಂಕುತಿಮ್ಮ ॥ ೭೮೨ ॥
andige andina kelasa, sandanitarali tRupti । kundada ubbada manasu bandu Enirali ॥ bandhu mati lOkadali, mun dRuShTi paramadali । hondiralu ivu adu puNya - Mankutimma ॥ 782 ॥
ಅಂದಿಗೆ ಅಂದಿನ ಕೆಲಸ, ಬಂದದ್ದರಲ್ಲಿ ಸಂತೃಪ್ತಿ. ಏನೇ ಸಿಕ್ಕರೂ, ಕಡಿಮೆ ಸಿಕ್ಕರೆ ಕೊರಗದೆ, ಸಿಕ್ಕರೆ ಗರ್ವಪಡದೆ, ಜಗತ್ತಿನ ಎಲ್ಲರೂ ನನ್ನ ಬಂಧುಗಳೇ ಎನ್ನುವಭಾವದಿಂದ, ಜಗತ್ತಿನ ಮೇಲೆ ಅಲ್ಲದೆ ಪರತತ್ವದ ದೃಷ್ಟಿ ಇತ್ತು ಪ್ರಯತ್ನ ಯಾರಿಗೆ ಮಾಡಲಾಗುತ್ತದೆಯೋ, ಅವರೇ ಪುಣ್ಯವಂತರು ಎಂದು ಉಲ್ಲೇಖಮಾಡಿದ್ದಾರೆ ಗುಂಡಪ್ಪನವರು ಈ ಮುಕ್ತಕದಲ್ಲಿ.
Fortunate are those people who possess these: ability to finish that day's task on the same days, satisfaction with whatever they have (or get), a mind that neither grieves nor rejoices come what may, friends of the entire world, their sight set on the universal truth. - Mankutimma
Video Coming Soon
Detailed video explanations by scholars and experts will be available soon.