Back to List

Kagga 781 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಕಾಳನುದಯದಿ ಬಿತ್ತೆ ಸಂಜೆಗದು ಪೈರಹುದೆ? । ಪಾಲುಂಟು ಕಾಲಂಗೆ ನಮ್ಮ ಕೃಷಿಗಳಲಿ ॥ ವೇಳೆ ಗಡು ಮರೆತಾತುರದಿನ್ ಅಡುಗೆ ಪಕ್ಕಹುದೆ । ತಾಳುಮೆಯೆ ಪರಿಪಾಕ - ಮಂಕುತಿಮ್ಮ ॥ ೭೮೧ ॥

kALanu udayadi bitte sanjegadu pairahude? । pAluNTu kAlange namma kRuShigaLali ॥ vELe gaDu maretu aaturadin aDuge pakkahude । tALumeye paripAka - Mankutimma ॥ 781 ॥

Meaning in Kannada

ಸೂರ್ಯೋದಯದ ಸಮಯಕ್ಕೆ ಕಾಳ ಬಿತ್ತಿದರೆ ಸಂಜೆಯ ವೇಳೆಗೆ ಅದು ಮೊಳೆತು ಪೈರಾಗುವುದೇ? ಎಲ್ಲಕ್ಕೂ ಸಮಯದ ಒಂದು ನಿಯಮವುಂಟು. ಅಡುಗೆ ಮಾಡುವಾಗ ಇಟ್ಟ ವಸ್ತುಗಳು ಕಾದು, ಬೆಂದು ಪಕ್ವವಾಗಲು ಒಂದು ಸಮಯದ ಮಿತಿ ಇದೆ ಅಲ್ಲವೇ? ಆತುರ ಪಟ್ಟರೆ ಅಡುಗೆ ಪಕ್ವವಾಗುವುದೇ ಹಾಗಾಗಿ ಜಗತ್ತಿನಲ್ಲಿ ನಾವು ಪಕ್ವವಾಗಬೇಕಾದರೆ ತಾಳ್ಮೆ ಬಹಳ ಮುಖ್ಯ ಎಂದು ಉಲ್ಲೇಖ ಮಾಡಿದ್ದಾರೆ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Can one sow the seed in the morning and expect a harvest by evening? Time has a great role to play in out efforts. Can one forget about time and cook food hurriedly? Patience makes the finished product complete. - Mankutimma

Themes

Duty

Video Section

Video Coming Soon

Detailed video explanations by scholars and experts will be available soon.