Mankutimmana Kagga by D.V. Gundappa
ಮಳೆಗೊಂದು ಬೆಳೆಗೊಂದು ಫಲಕೊಂದು ಋತುವಂತೆ । ಬೆಳೆಯಿಪುದು ಜೀವವೃಕ್ಷವ ಕಾಲನಿಯತಿ ॥ ತಿಳಿವುಮೊಳ್ತನಮುಂ ವಿರಕ್ತಿಯುಂ ಮುಕ್ತಿಯುಂ । ಗಳಿಗೆ ಸರಿಸೇರ್ದಂದು - ಮಂಕುತಿಮ್ಮ ॥ ೭೮೦ ॥
maLEgondu beLegondu phalakondu Rutuante । beLeyipudu jIva vRukShava kAla niyati ॥ tiLivum oLtanamum viraktiyum muktiyum । gaLige sari sErdandu - Mankutimma ॥ 780 ॥
ಮಳೆಗೆ ಒಂದು ಋತು, ಬೆಳೆಗೆ ಒಂದು ಋತು, ಫಲಕ್ಕೆ ಒಂದು ಋತುವಿರುವಂತೆ, ಈ ಜೀವವೆಂಬ ವೃಕ್ಷವೂ ಕಾಲಾನುಕಾಲಕ್ಕೆ ಬೆಳೆಯುತ್ತದೆ.ಅದೇ ರೀತಿಸರಿಯಾದ ಸಮಯ ಕೂಡಿಬಂದಾಗ ತಿಳಿವು, ಒಳ್ಳೆಯತನವು, ವಿರಕ್ತಿ ಮತ್ತು ಮುಕ್ತಿಗಳೂ ಲಭ್ಯವಾಗುತ್ತದೆ ಎಂಬ ಅರಿವನಿತ್ತಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
There is a season for rain, one for growth and one for harvest. The tree of life will grow according to the schedule set by time. Wisdom, good character, detachment and salvation will all come when the time is ripe. - Mankutimma
Video Coming Soon
Detailed video explanations by scholars and experts will be available soon.