Mankutimmana Kagga by D.V. Gundappa
ದೊರೆವ ಜೀತಕೆ ದುಡಿತ, ಮರುದಿನದ ಚಿಂತೆ ಮಿತ । ಹೊರೆಯ ಹಗುರಾಗಿಸುವ ಕೆಳೆಯರೊಡನಾಟ ॥ ಸರಳತೆಯ ಪರಿತುಷ್ಟಿ, ಪರಮಾರ್ಥ ದೃಷ್ಟಿಯಿವು । ಸರಿಗೂಡೆ ಸುಕೃತವದು - ಮಂಕುತಿಮ್ಮ ॥ ೭೭೯ ॥
doreva jItake duDita, marudinada chinte mita । horeya hagurAgisuva keLeyara OdanATa ॥ saraLateya parituShTi paramArtha dRuShTiyivu । sarigUDe sukRutavadu - Mankutimma ॥ 779 ॥
ನಮಗೆ ಎಷ್ಟು ಹಣ ಸಿಗುತ್ತದೋ ಅಷ್ಟಕ್ಕೆ ನಿರ್ವಂಚನೆಯಿಂದ ದುಡಿತ, ಮುಂದೇನು ಎನ್ನುವುದರ ಕುರಿತು ಮಿತವಾದ ಚಿಂತೆ, ಜೀವನದ ಹೊರೆಯನ್ನು ಹಗುರಾಗಿಸಿಕೊಳ್ಳಬಹುದಾದಂತಹ ಸಂಗ ಸಹವಾಸಗಳು, ಸರಳವಾದಂತಹ ಜೀವನದ ಶೈಲಿಯಿದ್ದರೆ, ಬದುಕಿನಲ್ಲಿ ಪರಮಾರ್ಥ ಚಿಂತನೆಗೆ ಸಾಕಷ್ಟು ಸಮಯಸಿಗುತ್ತದೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
A person is really fortunate if he has all these together: rightful wages for his work, limited worries of tomorrow, a good group of friends to lessen his burden of life, satisfaction in simplicity and eyes set on the universal truth. - Mankutimma
Video Coming Soon
Detailed video explanations by scholars and experts will be available soon.