Mankutimmana Kagga by D.V. Gundappa
ವಿಷಯಭೋಗವಿರಕ್ತಿ, ವಿಶ್ವಲೀಲಾಸಕ್ತಿ । ಕೃಷಿಗೆ ಸಂತತ ದೀಕ್ಷೆ, ವಿಫಲಕೆ ತಿತಿಕ್ಷೆ ॥ ವಿಷಮದಲಿ ಸಮದೃಷ್ಟಿ, ವಿವಿಧಾತ್ಮ ಸಂಸೃಷ್ಟಿ । ಕುಶಲಸಾಧನಗಳಿವು - ಮಂಕುತಿಮ್ಮ ॥ ೭೭೮ ॥
viShaya bhOga virakti, vishva lIlA aasakti । kRuShige santata dIkShe, viphalake titikShe ॥ viShamadali samadRuShTi, vividhAtma sandRuShTi । kushala sAdhanagaLivu - Mankutimma ॥ 778 ॥
ವಿಷಯಗಳ ಭೋಗದಲಿ ವಿರಕ್ತಿ, ವಿಶ್ವ ಲೀಲೆಯಲ್ಲಿ ಆಸಕ್ತಿ, ಕರ್ತವ್ಯವನ್ನು ಮಾಡಲು ಸದಾ ನಿರತ, ವೈಫಲ್ಯಕ್ಕೆ ಅವಿಚಲಿತ, ಜಗತ್ತಿನ ವೈವಿಧ್ಯತೆಯಲ್ಲಿ ಸಮದೃಷ್ಟಿ, ಜಗತ್ತಿನ ಆತ್ಮಗಳೆಲ್ಲವೂ ಒಂದೇ ಎನ್ನುವ ಜಗದಾತ್ಮಭಾವ, ಇಂತಹ ಗುಣಗಳಿದ್ದರೆ ಅವುಗಳು ಪರತತ್ವವನ್ನು ಅರಿಯುವ ಪ್ರಯತ್ನಕ್ಕೆ ಸೂಕ್ತವಾದ ಸಾಧನಗಳು ಎಂದು ಹೇಳಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
These are the qualities that will help you lead a happy life. Disinterest in the material pleasures, indulging in understanding of the world, always being hardworking, exercising patience when fail, keeping a balanced mind when faced with troubles, treating all other beings as same (equal to self). - Mankutimma
Video Coming Soon
Detailed video explanations by scholars and experts will be available soon.