Mankutimmana Kagga by D.V. Gundappa
ಸಾಮಾನ್ಯ ರೂಪದಲಿ, ಸಂಸಾರಿವೇಷದಲಿ । ಸ್ವಾಮಿ ನಿನ್ನೆಡೆಗೆ ಬರಬಹುದು ವರ ನೀಡಿ ॥ ಮೈಮೆ ಕಾಂಬೊಡೆ ನಿನಗೆ ಸಂಸ್ಕಾರವಿರಬೇಕು । ತಾಮಸಿಗೆ ವರವೆಲ್ಲಿ? - ಮಂಕುತಿಮ್ಮ ॥ ೭೭೭ ॥
sAmAnya rUpadali, samsAri vEShadali । svAmi ninneDege barabahudu vara nIDi ॥ maime kAmboDe ninage samskAravirabEku । tAmasige varavelli? - Mankutimma ॥ 777 ॥
ಪರಮಾತ್ಮ ನಿನಗೆ ವರ ನೀಡಲು, ಸಾಮಾನ್ಯನ ರೂಪಧರಿಸಿ ಬರಬಹುದು, ಸಂಸಾರಿಯ ವೇಷಧರಿಸಿ ಬರಬಹುದು. ಅವನ ಮಹಿಮೆಯನ್ನು ಕಾಣಲು ಒಂದು ಉನ್ನತ ಸಂಸ್ಕಾರವಿರಬೇಕು. ತಾಮಸ ಗುಣವುಳ್ಳವನಿಗೆ ವರವೆಲ್ಲಿ ಸಿಗುವುದು ಎಂದು ಸರ್ವಾತ್ಮಾನುಭವದ ವಿಚಾರವನ್ನು ಮಂಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
God may come to you in ordinary form as another worldly person. He comes to you to give you a boon. But to see him (as God) you need to have righteous ways. How will a greedy (interested in enjoying pleasures) ever get a boon? (He will not be able to recognize God and treat him well) - Mankutimma
Video Coming Soon
Detailed video explanations by scholars and experts will be available soon.