Mankutimmana Kagga by D.V. Gundappa
ಏನಾದೊಡೆಯುಮಪ್ಪುದುಂಟು, ಸಿದ್ಧನಿರದಕೆ । ಭಾನು ತಣುವಾದಾನು; ಸೋಮ ಸುಟ್ಟಾನು ॥ ಕ್ಷೋಣಿಯೇ ಕರಗೀತು; ಜಗ ಶೂನ್ಯವಾದೀತು । ಮೌನದಲಿ ಸಿದ್ಧನಿರು - ಮಂಕುತಿಮ್ಮ ॥ ೭೮೪ ॥
EnAdoDeyum appudunTu, siddhaniru adake । bhAnu taNuvAdAnu; sOma suTTAnu ॥ kShONiyE karagItu; jaga shUnyavAdItu । maunadali siddhaniru - Mankutimma ॥ 784 ॥
ದಗದಗಿಸುವ ಸೂರ್ಯನೇ ತಣ್ಣಗಾಗಬಹುದು, ಶೀತಲ ಚಂದ್ರ ಬೆಂಕಿಯಾಗಿ ಸುಡಬಹುದು. ಭೂಮಿಯೇ ಕರಗಿಹೋಗಬಹುದು. ಜಗತ್ತಿನಲ್ಲಿ ಏನೂ ಇಲ್ಲದೆ ಸಂಪೂರ್ಣ ಶೂನ್ಯವಾಗಬಹುದು. ಇದಾವುದಕ್ಕೂ ವಿಚಲಿತನಾಗದೆ, ಮೌನದಿಂದ ಎಲ್ಲವನ್ನೂ ಎದುರಿಸಲಿಕ್ಕೆ ಸಿದ್ಧನಾಗಿರು, ಎಂದು ಬದುಕಿನಲ್ಲಿ ನಿರ್ಭಯವಾದ ಜೀವನಕ್ಕೆ ಒಂದು ಕಿವಿಮಾತನ್ನು ನಮಗೆ ಹೇಳಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Anything may happen. Be prepared for that. Sun may go cold and Moon may get hotter. Earth may melt and world may go empty. You face it with courage and silently be prepared for it. - Mankutimma
Video Coming Soon
Detailed video explanations by scholars and experts will be available soon.