Back to List

Kagga 774 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ತರಣಿದರ್ಶನಕಿಂತ ಕಿರಣಾನುಭವ ಸುಲಭ । ಪರಮಶಾಸ್ತ್ರಕ್ಕಿಂತ ಸರಿಯುದಾಹರಣೆ ॥ ಪರಮತತ್ತ್ವ ಕಂಡ ಗುರುವನರಸುವುದೆಲ್ಲಿ? । ದೊರೆತಂದು ನೀಂ ಧನ್ಯ - ಮಂಕುತಿಮ್ಮ ॥ ೭೭೪ ॥

taraNi darshanakinta kiraNAnubhava sulabha । parama shAstrakkinta sari udAharaNe ॥ paramatattva kanDa guruvanu arasuvudelli? । doretandu nIm dhanya - Mankutimma ॥ 774 ॥

Meaning in Kannada

ಸೂರ್ಯನನ್ನು ನೋಡುವುದಕ್ಕಿಂತ ಅವನ ಕಿರಣಗಳಿಂದ ಹೊರಸೂಸುವ ಬೆಳಕು ಸಹನೀಯ. ಅತ್ಯುತ್ತಮ ಶಾಸ್ತ್ರಗಳನ್ನು ಅರಿಯುವುದಕ್ಕಿಂತ ಅದರ ಸಾರವನ್ನು ಉದಾಹರಣೆಯಾಗಿ ನೋಡಿದರೆ ಅರ್ಥವಾಗುವುದು ಸುಲಭ. ಹಾಗೆ ಪರತತ್ವವನ್ನು ಅರಿತ ಗುರುವನ್ನು ಅರಸುವುದು ಎಲ್ಲಿ? ಅಂತಹ ಗುರು ದೊರೆತ ದಿನ ನೀನು ಧನ್ಯ, ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

It is easier to bask in sunlight than look at the sun directly. It is easier to understand by examples than to learn all the scriptures first hand. We all want to learn about the universal truth. But is there a teacher who can simplify it for us? Where can we start the search for him? You will be fortunate the day you get him. - Mankutimma

Themes

Wisdom

Video Section

Video Coming Soon

Detailed video explanations by scholars and experts will be available soon.