Mankutimmana Kagga by D.V. Gundappa
ಹೊರಗೆ ಲೋಕಾಸಕ್ತಿಯೊಳಗೆ ಸಕಲ ವಿರಕ್ತಿ । ಹೊರಗೆ ಕಾರ್ಯಧ್ಯಾನವೊಳಗುದಾಸೀನ ॥ ಹೊರಗೆ ಸಂಸೃತಿಭಾರವೊಳಗದರ ತಾತ್ಸಾರ । ವರಯೋಗಮಾರ್ಗವಿದು - ಮಂಕುತಿಮ್ಮ ॥ ೭೭೩ ॥
horage lOkAsakti oLage sakala virakti । horage kAryadhyAna oLage udAsIna ॥ horage samsRutibhAra oLage adara tAtsAra । vara yOga mArgavidu - Mankutimma ॥ 773 ॥
ಹೊರಗೆ ಲೋಕದಲ್ಲಿ ಆಸಕ್ತಿ ಮತ್ತು ಒಳಗೆ ಎಲ್ಲದರಲ್ಲೂ ವಿರಕ್ತಿ. ಹೊರಗೆ ಸದಾಕಾಲ ಕಾರ್ಯ ತತ್ಪರತೆ ಆದರೆ ಯಾವುದರಲ್ಲೂ ಆಸಕ್ತಿಯಿಲ್ಲದೆ ಉದಾಸೀನ. ಹೊರಗೆ ಸಂಸ್ಕೃತಿಯ ಭಾರ, ಒಳಗೆ ಅದರಲ್ಲಿ ತಾತ್ಸಾರ, ಈ ರೀತಿಯಿರುವುದು ಶ್ರೇಷ್ಠತಮ ಯೋಗಮಾರ್ಗವೆಂದು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
This is a very good plan to live happily. On the outside we must engage in every worldly activity that we deem fit. Inside, we should be detached to it. On the outside we must give hundred percent to the work at hand. Inside, we must not care too much about its result. On the outside we must take part in the every-day progress of the world - birth, suffering, happiness and death. Inside, we should not care about it. - Mankutimma
Video Coming Soon
Detailed video explanations by scholars and experts will be available soon.