Mankutimmana Kagga by D.V. Gundappa
ಮೂರಿರಲಿ ವಾದ, ಮುನ್ನೂರಿರಲಿ; ಸಕಲರುಂ । ಸಾರವಸ್ತುವನೊಂದನೊಪ್ಪಿಕೊಳುವವರೇ ॥ ಪಾರಮಾರ್ಥಿಕವನಂತೆಣಿಸಿದ ವ್ಯವಹಾರ । ಭಾರವಾಗದು ಜಗಕೆ - ಮಂಕುತಿಮ್ಮ ॥ ೭೭೨ ॥
mUrirali vAda, munnUrirali; sakalarum । sAravastuvanoMdanu oppikoLuvavare ॥ pAramArthikavanu anteNisida vyavahAra । bhAravAgadu jagake - Mankutimma ॥ 772 ॥
ಹಿಂದಿನ ಮುಕ್ತಕದಲ್ಲಿ ಹೇಳಿದಂತೆ ಪರಮಾರ್ಥದ ಅಭಿಪ್ರಾಯ ಮೂರಿರಲಿ ಅಥವಾ ಮುನ್ನೂರಿರಲಿ, ಆದರೆ ಎಲ್ಲರೂ ಆ ಪರಮಾರ್ಥದ ಮೂಲವಸ್ತುವು ಒಂದೇ ಎಂದು ಒಪ್ಪಿಕೊಳ್ಳುತ್ತಾರೆ. ಎಲ್ಲರ ಮನಸ್ಸು ಯಾವ ರೂಪದಲ್ಲಾದರೂ ಸರಿ, ಕೇವಲ ಒಂದೇ ಪರಬ್ರಹ್ಮ ವಸ್ತುವನ್ನು ಮನದಲ್ಲಿಟ್ಟುಕೊಂಡು ಪರಸ್ಪರ ವ್ಯವಹರಿಸಿದರೆ ಜಗತ್ತಿನ ಬದುಕು ಹಗುರವೆಂದೆನಿಸುತ್ತದೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Let there by three treatises or there hundred. All of them agree that there is one thing - God like - that supports the entire creation of this universe. What ever treatise that looks at the truth this way can not be harmful to the world. - Mankutimma
Video Coming Soon
Detailed video explanations by scholars and experts will be available soon.