Mankutimmana Kagga by D.V. Gundappa
ನೀರಧಿ ಬ್ರಹ್ಮ, ನೀರ್ಗಲ್ ಜೀವವೆನುತೊಂದು । ಕ್ಷೀರವದು, ಘೃತವಿದದರೊಳಗೆನ್ನುತೊಂದು ॥ ಕೀರು ಪರಮಾನ್ನವದು, ದ್ರಾಕ್ಷಿಯಿದೆನುತ್ತೊಂದು । ಮೂರಿಂತು ಮತವಿವರ - ಮಂಕುತಿಮ್ಮ ॥ ೭೭೧ ॥
nIradhi brahma, nIrgal jIvavu enuta ondu । kShIravadu, ghRutavidu adaroLage ennuta ondu॥ kIru paramAnnavadu, drAkShiyidu enuttondu । mUrintu matavivara - Mankutimma ॥ 771 ॥
ಸೃಷ್ಟಿಕರ್ತ ಬ್ರಹ್ಮ ಕಡಲಂತೆ, ಜೀವ ಕಡಲ ಮೇಲೆ ತೇಲುವ ಮಂಜಗಡ್ಡೆಯಂತೆ ಎನ್ನುವುದು ಒಂದು ಅಭಿಪ್ರಾಯ, ಪರಮಾತ್ಮ ಹಾಲು ಆ ಹಾಲಿನಲ್ಲಿ ಇರುವ ತುಪ್ಪವೇ ಜೀವ ಎನ್ನುವುದು ಇನ್ನೊಂದು ಅಭಿಪ್ರಾಯ , ಆ ಪರಮಾತ್ಮ ಪಾಯಸ ಪರಮಾನ್ನವಿದ್ದಹಾಗೆ. ಅದರಲ್ಲಿ ತೇಲಾಡುವ ದ್ರಾಕ್ಷಿಯೇ ಜೀವ ಎನ್ನುವುದು ಮತ್ತೊಂದು ಅಭಿಪ್ರಾಯ. ಹೀಗೆ ಪರಮಾತ್ಮ ಮತ್ತು ಜೀವಾತ್ಮರ ಸ್ವರೂಪ ಕುರಿತು ಮೂರು ಅಭಿಪ್ರಾಯಗಳಿವೆ ಎಂದು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
This is the summary of the three prevalent treatises about the universe. One says God is like an ocean and beings are like an iceberg - made of the same material but visibly different and supported by God. Second one says that God is like milk and beings are like ghee - the two are indistinguishable till one makes an effort to churn it. The third one says, good is kheer (a sweet dish) and beings are like raisins in it. Beings are just a item in the recipe and clearly distinguishable from the complete product (Kheer). - Mankutimma
Video Coming Soon
Detailed video explanations by scholars and experts will be available soon.