Mankutimmana Kagga by D.V. Gundappa
ನೇತ್ರಯುಗಳಂ ಪಿಡಿಗುಮೊಂದು ಲಕ್ಷ್ಯವ ಕೂಡಿ । ಹಸ್ತಯುಗ ಸಾಧಿಪುದು ಮನದರ್ಥವೊಂದನ್ ॥ ದ್ವೈತದಿಂದದ್ವೈತವದ್ವೈತದೊಳ್ ದ್ವೈತ । ಚೈತನ್ಯ ಲೀಲೆಯಿದು - ಮಂಕುತಿಮ್ಮ ॥ ೭೭೦ ॥
nEtrayugaLam piDigum ondu lakShayava kUDi । hastayuga sAdhipudu manadarthavondan ॥ dvaitadinda advaita advaitadoL dvaita । chaitanya lIleyidu - Mankutimma ॥ 770 ॥
‘ಎರಡು’ ಕಣ್ಗಳ ದೃಷ್ಟಿಯ ಹಿಡಿತಕ್ಕೆ ಸಿಕ್ಕುವುದು ‘ಒಂದು’ ಲಕ್ಷ್ಯ. ಆ ‘ಒಂದು’ ಲಕ್ಷ್ಯವನ್ನಿಟ್ಟುಕೊಂಡು ಸಾಧಿಸುವುದಕ್ಕೆ ‘ಎರಡು’ ಕೈಗಳ ಪ್ರಯತ್ನ. ಆ ‘ಎರಡು’ ಕೈಗಳ ಪ್ರಯತ್ನ ಸಾಧಿಸುವುದು ಮನದ ‘ಒಂದು’ ಅರ್ಥವನ್ನು. ಹೀಗೆ ದ್ವೈತದಿಂದ ಅದ್ವೈತ ಮತ್ತು ಅದ್ವೈತಕ್ಕಾಗಿ ದ್ವೈತದ ಪರಸ್ಪರ ಬಾಂಧವ್ಯವು ಪರಮಾತ್ಮನ ಲೀಲಾವಿನೋದವಷ್ಟೇ, ಎಂದು ಒಂದು ಹಲವಕ್ಕೆ ಮತ್ತು ಹಲವು ಒಂದಕ್ಕೆ ಪೂರಕವಾಗಿದೆ ಈ ಜಗತ್ತಿನಲ್ಲಿ ಎನ್ನುವ ತತ್ವವನ್ನು ಉಲ್ಲೇಖಮಾಡಿದ್ದಾರೆ, ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
The two eyes set you a single target and the two hands help you to achieve a single goal that the mind sets. There is unity through duality and duality inside unity. This is the mark of the Cosmic Spirit of God. - Mankutimma
Video Coming Soon
Detailed video explanations by scholars and experts will be available soon.