Mankutimmana Kagga by D.V. Gundappa
ಒಂದುದಿನವೌತಣಕೆ, ಉಪವಾಸಕಿನ್ನೊಂದು । ಸಂದಣಿಯದಿನವೊಂದು, ಬಿಡುವು ದಿನವೊಂದು ॥ ಹೊಂದಿರ್ದೊಡುಭಯಮುಂ ಜೀವಕದು ಸುಖ ಚಲನ । ಒಂದುಕಾಲ್ನಡೆ ಸುಖವೆ? - ಮಂಕುತಿಮ್ಮ ॥ ೭೬೯ ॥
ondu dinavu autaNake, upavAsake innondu । sandaNiya dinavondu, biDuvu dinavondu ॥ hondirdoDe ubhayamum jIvakadu sukha chalana । ondu kAlnaDe sukhave? - Mankutimma ॥ 769 ॥
ಒಂದೇ ಕಾಲಿನ ನಡಿಗೆ ಹೇಗೆ ಸುಖವಲ್ಲವೋ, ಹಾಗೆಯೇ, ಒಂದು ದಿನ ಔತಣಕ್ಕೆ ಹೋಗುವುದು ಮತ್ತೊಂದು ದಿನ ಉಪವಾಸದ ವ್ರತವನ್ನನುಸರಿಸುವುದು, ಒಂದು ದಿನಸಮಾರಂಭದಲ್ಲಿ ಪಾಲ್ಗೊಳ್ಳುವುದು ಮತ್ತೊಂದು ದಿನ ಪೂರ್ಣ ಬಿಡುವನ್ನು ಅನುಭವಿಸುವುದು, ಹೀಗೆ ಎರಡೂ ರೀತಿಯ ಅನುಭವಗಳಿದ್ದರೆ ಬದುಕಿನಲ್ಲಿ ಚೈತನ್ಯವಿರುತ್ತದೆ ಎಂದು ಬದುಕಿನಲ್ಲಿ ಸ್ವಾರಸ್ಯವನ್ನು ಅನುಭವಿಸುವ ಬಗೆಯನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
One day we feast. We stay hungry as a ritual on some other day. One day will be very busy. Another day will be for rest. When the two are well interspersed, life will be happy. If there are days of only one kind, then life becomes tough - like walking on one leg. - Mankutimma
Video Coming Soon
Detailed video explanations by scholars and experts will be available soon.