Mankutimmana Kagga by D.V. Gundappa
ಗತಿಯೇನು ಎನಗೆನುತ ಕೇಳ್ವವರೆ ಎಲ್ಲರುಂ । ಹಿತವೆಂತು ಜಗಕೆಂದು ಕೇಳುವವರಾರು? ॥ ಮತಿಯ ವಿಶ್ವದಿ ಬೆರಸಿ ಜೀವಿತವ ವಿಸ್ತರಿಸೆ । ಪಥ ಮುಕ್ತಿಗಾಗಳೇ - ಮಂಕುತಿಮ್ಮ ॥ ೭೬೮ ॥
gatiyEnu enegenuta kELvavare ellarum । hitaventu jagakendu kELuvavarAru? ॥ matiya vishvadi berasi jIvitava vistarise । patha muktige aagaLE - Mankutimma ॥ 768 ॥
ಮುಂದಕ್ಕೆ ನನ್ನ ಗತಿಯೇನು? ಎಂದು ಕೇಳುವವರೇ ಹೆಚ್ಚು ಜನರಿದ್ದಾರೆ. ಜಗದ ಹಿತದ ಚಿಂತನೆ ಮಾಡುವವರಾರೂ ಇಲ್ಲ. ಮನದ ಆಲೋಚನೆಯನ್ನು ವಿಸ್ತಾರಗೊಳಿಸಿ ಸ್ವಾರ್ಥವನ್ನು ಬಿಟ್ಟು ಜಗಚ್ಚಿಂತನೆಯಲ್ಲಿ ಸರ್ವರ ಹಿತ, ಒಳಿತಿಗಾಗಿ ತೊಡಗಿಸಿಕೊಂಡರೆ, ಅದೇ ಜೀವನದಲ್ಲಿ ‘ಮುಕ್ತಿ’ಗೆ ದಾರಿ ಎಂದಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Everyone is worried about what would happen to them. Nobody is asking what is good for the world? When we use our wisdom with a world view and expand our consciousness, that becomes a path to salvation. - Mankutimma
Video Coming Soon
Detailed video explanations by scholars and experts will be available soon.