Mankutimmana Kagga by D.V. Gundappa
ಕ್ಷಣದಿಂದನುಕ್ಷಣಕೆ, ದಿನದಿಂದ ಮರುದಿನಕೆ । ಅನಿತನಿತರೊಳೆ ಬದುಕುತಾಯುವನು ಕಳೆವಾ ॥ ಮನದ ಲಘುಸಂಚಾರವೊಂದು ಯೋಗದುಪಾಯ । ಶುನಕೋಪದೇಶವದು - ಮಂಕುತಿಮ್ಮ ॥ ೭೬೭ ॥
kShaNadinda anukShaNake, dinadinda marudinake । anitu anitaroLe badukuta aayuvanu kaLeva aa ॥ manada laghu sanchAravu ondu yOgada upAya । shunakana upadeshavadu - Mankutimma ॥ 767 ॥
‘ಹೊಲೆಯನಂದ’ ‘ಶಬರಿ’ ಮತ್ತು ‘ಹನುಮಂತ’ ರನ್ನು ಮತ್ತು ಅವರ ಭಕ್ತಿ ಮತ್ತು ಶ್ರದ್ಧೆಯನ್ನು ಈ ಹಿಂದಿನ ಮೂರು ಮುಕ್ತಕಗಳಲ್ಲಿ ಉಲ್ಲೇಖಮಾಡಿ, ಈ ಮುಕ್ತಕದಲ್ಲಿ ಒಂದು ನಾಯಿಯ ಜೀವನವನ್ನು ತೋರಿ, ‘ನೋಡಿ ಇದರಿಂದಲೂ ಬದುಕಿನ ಮಹತ್ತತ್ವವನ್ನು ಕಲಿಯಬಹುದು’ ಎಂದು ನಮಗೆ ತೋರಿದ್ದಾರೆ ಮಾನ್ಯ ಗುಂಡಪ್ಪನವರು.
Living from moment to moment, day to day and finding small happiness in little small pocket and leading the entire life thus. It is a lighthearted way of leading life and a good plan. This is the plan followed by a dog. - Mankutimma [Translator's note: There are other interpretation about a sage name Shaunaka who was a proponent of such a lifestyle.]
Video Coming Soon
Detailed video explanations by scholars and experts will be available soon.