Mankutimmana Kagga by D.V. Gundappa
ಘನತತ್ತ್ವವೊಂದಕ್ಕೆ ದಿನರಾತ್ರಿ ಮನಸೋತು । ನೆನೆಯದಿನ್ನೊಂದನೆಲ್ಲವ ನೀಡುತದರಾ ॥ ಅನುಸಂಧಿಯಲಿ ಜೀವಭಾರವನು ಮರೆಯುವುದು । ಹನುಮನುಪದೇಶ - ಮಂಕುತಿಮ್ಮ ॥ ೭೬೬ ॥
ghana tattva ondakke dina rAtri manasOtu । neneyade innondanu ella nIDuta adara aa ॥ anusandhiyali jIvabhAravanu mareyuvudu । hanumanupadesha - Mankutimma ॥ 766 ॥
ಮಹತ್ತರವಾದ ತತ್ವಕ್ಕೆ ದಿನರಾತ್ರಿ ಮನಸ್ಸನ್ನು ತೊಡಗಿಸಿಕೊಂಡು, ಬೇರಾವುದನ್ನೂ ನೆನೆಯದಂತೆ ಆ ಘನ ತತ್ವದಲ್ಲಿ ಲೀನವಾಗಿ ತನ್ನ ಜೀವ ಭಾರವನು ಮರೆಯುವಂತಹ ಒಂದು ಆದರ್ಶದ ನಿದರ್ಶನವನ್ನು ತೋರುವುದೇ ಮಹಾತ್ಮ ಹನುಮಂತನ ಜೀವನವೆಂದು ಹೇಳುತ್ತಾ, ಏಕಾಗ್ರತೆಯಿಂದ ಆತ್ಮಾನುಸಂಧಾನ ಮಾಡಿಕೊಂಡಾಗ ಲಭ್ಯವಾಗುವ ಮೇರು ಸ್ಥಿತಿಯನ್ನು ನಮಗೆ ತೋರಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Surrendering to a greater call and thinking about it day and night, not thinking about any other thing, seeing everything else in its light - spending the life thus is what Hanuman teaches us to do. To Hanuman, devotion towards Rama was that greater call. - Mankutimma
Video Coming Soon
Detailed video explanations by scholars and experts will be available soon.