Back to List

Kagga 765 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ತನ್ನ ರುಚಿ ರಾಮರುಚಿ; ತನ್ನ ಸಂತುಷ್ಟಿ ಪರಿ- । ಪೂರ್ಣವಪ್ಪುದು ರಾಮಸಂತುಷ್ಟಿಯಿಂದೆ ॥ ಎನ್ನುವಾ ಸಾಜಾದಾ ದೈವಾತ್ಮಭಾವದಲಿ । ಧನ್ಯಳಾದಳು ಶಬರಿ - ಮಂಕುತಿಮ್ಮ ॥ ೭೬೫ ॥

tanna ruchi rAmaruchi; tanna santuShTi । paripUrNavappudu rAmasantuShTiyinde ॥ ennuva sAjAdA daivAtma bhAvadali । dhanyaLAdaLu shabari - Mankutimma ॥ 765 ॥

Meaning in Kannada

ತನಗೆ ರುಚಿಯಾಗಿ ಕಂಡದ್ದು ರಾಮನಿಗೂ ರುಚಿಯಾಗುವುದು. ರಾಮನಿಗೆ ರುಚಿಯಾಗಿ ಕಂಡು ರಾಮ ತೃಪ್ತಿಪಟ್ಟರೆ ಅವನ ತೃಪ್ತಿಯೇ ನನ್ನ ತೃಪ್ತಿ ಎನ್ನುವ ದೈವಾತ್ಮಭಾವವನ್ನು ಅನುಭವಿಸಿ ಶಬರಿ ಧನ್ಯಳಾದಳು, ಎಂದು ಶಬರಿಯ ವೃತ್ತಾಂತವನ್ನು ಅರುಹುತ್ತಾ ದೈವ ತೃಪ್ತಿಯಲ್ಲೇ ಮಾನವ ತೃಪ್ತಿ ಕಾಣಬೇಕು ಎಂದು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Shabari had another kind of sublime devotion towards Rama. She thought that only when Rama is happy could she be happy. So, she made sure that all the fruits she chose for him were sweet by tasting them herself. This blurring of the personal with the supreme soul is exemplified in Shabari. - Mankutimma

Themes

DevotionSelfWar

Video Section

Video Coming Soon

Detailed video explanations by scholars and experts will be available soon.